ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ | ಎನ್.ಡಿ.ಎ ಅಭ್ಯರ್ಥಿ ಶಶೀಲ್ ನಮೋಶಿಗೆ ಶಿಕ್ಷಕ ಮತದಾರರು ಬೆಂಬಲಿಸಿ: ಅಯ್ಯಪ್ಪ ರಾಮತೀರ್ಥ ಮನವಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಅ.23 ರಂದು ನಡೆಯಲೀರುವ ವಿಧಾನ ಪರಿಷತ್ತು ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಶಶೀಲ್ ನಮೋಶಿ ಅವರನ್ನು ಶಿಕ್ಷಕ ಮತದಾರರು ಬೆಂಬಲಿಸಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಕಲಬುರಗಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಪ್ರಕೋಷ್ಟಗಳ ಜಿಲ್ಲಾ ಸಹ ಸಂಯೋಜಕ ಅಯ್ಯಪ್ಪ ರಾಮತೀರ್ಥ ಮನವಿ ಮಾಡಿದ್ದಾರೆ.

ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಶೀಲ್ ನಮೋಶಿ ಅವರೊಬ್ಬ ಅನುಭವಿಗಳು ಹಾಗೂ ಶಿಕ್ಷಕ ಸ್ನೇಹಿಯಾಗಿದ್ದಾರೆ ಹೀಗಾಗಿ ಚಿತ್ತಾಪುರ ಮತಕ್ಷೇತ್ರದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಶಿಕ್ಷಕ ಮತದಾರ ಬಂಧುಗಳು ಮೊದಲ ಪ್ರಾಶಸ್ತ್ಯ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಕೋರಿದ್ದಾರೆ.

ಇವರ ಕ್ರಮ ಸಂಖ್ಯೆ 2ನ್ನು ಗುರುತಿಸಿ ಮೊದಲ ಪ್ರಾಶಸ್ತ್ಯ ತಮ್ಮ ಅಮೂಲ್ಯ ಮತವನ್ನು ನೀಡುವುದರ ಜೊತೆಗೆ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಸರ್ಕಾರವು ಆಡಳಿತವನ್ನು ಮಾಡಲು ನೈತಿಕತೆಯನ್ನು ಕಳೆದುಕೊಂಡಿದ್ದು ಇವರ ದುರಾಡಳಿತವನ್ನು ತಿರಸ್ಕರಿಸುವುದರ ಜೊತೆಗೆ ರಾಜ್ಯದಲ್ಲಿ ಈ ಬಾರಿ ಎನ್.ಡಿ. ಎ. ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಕರೆ ನೀಡಿದ್ದಾರೆ.

ಶಶೀಲ್ ನಮೋಶಿಯವರು ಕಲಬುರಗಿ ಭಾಗದ ಒಬ್ಬ ಸರಳ ಸಜ್ಜನ ರಾಜಕಾರಣಿಯಾಗಿದ್ದು ಈಗಾಗಲೇ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ 4 ಬಾರಿ ಚುನಾವಣೆಗೆ ಸ್ಪರ್ಧಿಸಿ, ಗೆದ್ದು ಪ್ರಾಮಾಣಿಕವಾಗಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಅಪಾರವಾದ ಸೇವೆಯನ್ನು ನೀಡಿದ ಹಿರಿಯ ಅನುಭವಿ ರಾಜಕಾರಣಿಯಾಗಿದ್ದಾರೆ. ಅಲ್ಲದೆ ಶಿಕ್ಷಣ ಸಂಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಸದಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ವಿಷಯದಲ್ಲಿ ಕಾಳಜಿವುಳ್ಳವರಾಗಿದ್ದು ಅನೇಕ ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನಲ್ಲಿ ಎಲ್ಲಾ ಶಿಕ್ಷಕರ ಪ್ರತಿನಿಧಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಪರಿಷತ್ತಿನಲ್ಲಿ ರಾಜ್ಯದ ಗಮನ ಸೆಳೆದಿದ್ದಾರೆ ಎಂದು ತಿಳಿಸಿದ್ದಾರೆ.

ಅದಕ್ಕಾಗಿ ಈ ಬಾರಿ ನಮ್ಮ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬರುವ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಬಳ್ಳಾರಿ, ವಿಜಯನಗರ ಭಾಗದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಅನುದಾನ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತದಾರ ಪಟ್ಟಿಯಲ್ಲಿರುವ ಎಲ್ಲಾ ವರ್ಗದ ಶಿಕ್ಷಕರು ಶಶೀಲ್ ನಮೋಶಿ ಅವರನ್ನು ಮತ್ತೊಮ್ಮೆ ಬೆಂಬಲಿಸಿ, ಆಶೀರ್ವದಿಸಿ ತಮ್ಮ ಅಮೂಲ್ಯ ಮತವನ್ನು ನೀಡಿ, ಈ ಬಾರಿಯೂ ಬಹುಮತ ದೊಂದಿಗೆ ಇವರನ್ನು ಆಯ್ಕೆಮಾಡಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಶಿಕ್ಷಕ ಮತದಾರ ಬಂಧುಗಳಲ್ಲಿ ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!