ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರ ನೇಮಕ | ಸಂಘಟನ್ ಸೃಜನ್ ಅಭಿಯಾನ-2 ಅ.24 ರಿಂದ ಪ್ರಾರಂಭ: ದೇಶಮುಖ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸಂಘಟನ್ ಸೃಜನ್ ಅಭಿಯಾನ-2ರ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಕುರಿತು ಕೆಪಿಸಿಸಿ ವತಿಯಿಂದ ಜಿಲ್ಲಾ ಉಸ್ತುವಾರಿ ವೀಕ್ಷಕರಾಗಿ ನೇಮಕಗೊಂಡ ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಕೆಪಿಸಿಸಿ ಸಂಯೋಜಕರುಗಳಾದ ಲಕ್ಷ್ಮೀಪತಿ, ಅಕ್ಕಮಹಾದೇವಿ ಆರ್. ಪಾಟೀಲ ರವರು ಅ. 24 ರಿಂದ 28 ರ ವರೆಗೆ ಜಿಲ್ಲೆಯ ಕೆಳಕಂಡ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಸಭೆಯನ್ನು ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕಿರಣ್ ದೇಶಮುಖ್ ತಿಳಿಸಿದ್ದಾರೆ.
ಕಾರಣ ಈ ಸಭೆಗೆ ಕೆಳಗೆ ತೋರಿಸಿದ ದಿನಾಂಕದಂತೆ ಆಯಾ ಕ್ಷೇತ್ರಕ್ಕೆ ಸಂಬಂದಿಸಿದ ಶಾಸಕರು, 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸದಸ್ಯರು, ಡಿಸಿಸಿ ಡೇಲಿಗೇಟ್ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಘಟಕ/ವಿಭಾಗ/ಸೆಲ್ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಖಂಡರು, ಹಾಲಿ ಹಾಗೂ ಮಾಜಿ ಚುನಾಯಿತ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿರಬೇಕು ಹಾಗೂ ಈ ಸಂದರ್ಭದಲ್ಲಿ ಆಕಾಂಕ್ಷಿಗಳು ಉಸ್ತುವಾರಿ ವೀಕ್ಷಕರಿಗೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದ್ದಾರೆ.
ಅ.24 ರಂದು ಕಮಲಾಪೂರ ಮದ್ಯಾಹ್ನ 2 ಗಂಟೆಗೆ, ಗುಲಬರ್ಗಾ ದಕ್ಷಿಣ ಸಂಜೆ 5 ಗಂಟೆಗೆ. ಅ.25 ರಂದು ಜೇವರ್ಗಿ ಬೆಳಗ್ಗೆ 10 ಗಂಟೆಗೆ, ಶಹಾಬಾದ ಮದ್ಯಾಹ್ನ 2 ಗಂಟೆಗೆ. ಅ.27 ರಂದು ಚಿಂಚೋಳಿ ಬೆಳಗ್ಗೆ 10 ಗಂಟೆಗೆ, ಸೇಡಂ ಮದ್ಯಾಹ್ನ 1 ಗಂಟೆಗೆ, ಚಿತ್ತಾಪುರ ಸಂಜೆ 4 ಗಂಟೆಗೆ. ಅ.28 ರಂದು ಅಫಜಲಪೂರ ಬೆಳಗ್ಗೆ 10 ಗಂಟೆಗೆ, ಆಳಂದ ಮದ್ಯಾಹ್ನ 2 ಗಂಟೆಗೆ.

