Oplus_0

ಚಿತ್ತಾಪುರದಲ್ಲಿ ಎಸ್ಐಆರ್ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ರಸ್ತೆತಡೆ ಪ್ರತಿಭಟನೆ | ಎಸ್‌ಐಆರ್ ಹೆಸರಿನಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆ: ಪ್ರವೀಣ್ ಪಾಟೀಲ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಹಕ್ಕುಗಳಿಗೆ ಧಕ್ಕೆ ತರುತ್ತಿದೆ ಎಂದು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ ಆರೋಪಿಸಿದರು.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ‌ಹಮ್ಮಿಕೊಂಡಿದ್ದ ಎಸ್ಐಆರ್ ವಿರೋಧಿಸಿ ವೋಟ್ ಬಚಾವೋ ದೇಶ ಬಚಾವೋ ರಸ್ತೆತಡೆ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಅಕ್ರಮವಾಗಿ ಕೈಬಿಡಲಾಗಿದೆ ‘ವೋಟ್ ಚೋರಿ’ ಎಂದು ಆರೋಪಿಸಿ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ಈ ದೇಶಾದ್ಯಂತ ವೋಟ್ ಬಚಾವೋ ದೇಶ ಬಚಾವೋ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುತ್ತಿದೆ ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ.  ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ರದ್ದುಗೊಳಿಸಬೇಕು ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಭೀಮಣ್ಣ ಸಾಲಿ, ಮುಕ್ತಾರ್ ಪಟೇಲ್, ಸುನೀಲ್ ದೊಡ್ಡಮನಿ ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವರುದ್ರಪ್ಪ ಭೀಣ್ಣಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ನಾಗರೆಡ್ಡಿ ಗೋಪಸೇನ್, ದೇವಿಂದ್ರ ಅರಣಕಲ್, ಮಲ್ಲಿಕಾರ್ಜುನ ಕಾಳಗಿ, ಜಗಣ್ಣಗೌಡ ರಾಮತೀರ್ಥ, ನಾಮದೇವ ರಾಠೋಡ, ಶೀಲಾ ಕಾಶಿ, ವೀರಪಾಕ್ಷಪ್ಪ ಗಡ್ಡದ್, ಹಣಮಂತ ಸಂಕನೂರ, ಜಗದೀಶ್ ಚವ್ಹಾಣ, ಬಸವರಾಜ ಹೊಸಳ್ಳಿ, ಯಲ್ಲಾಲಿಂಗ ಪೂಜಾರಿ ಮುಗುಟಿ, ಶರಣಪ್ಪ ನಾಟೀಕಾರ, ಜಫರುಲ್ ಹಸನ್, ಶೇಕ್ ಬಬ್ಲು, ಈರಪ್ಪ ಭೋವಿ, ಬಸವರಾಜ ಚಿನ್ನಮಳ್ಳಿ, ರಾಜಶೇಖರ್ ತಿಮ್ಮನಾಯಕ, ಸಾಬಣ್ಣ ಭರಾಟೆ, ಮುನಿಯಪ್ಪ ಕೊಳ್ಳಿ, ಶಿವಕಾಂತ ಬೆಣ್ಣೂರಕರ್, ರಮೇಶ್ ಹಡಪದ, ನಿಂಗಣ್ಣ ಹೆಗಲೇರಿ, ಸಾಬಣ್ಣ ಡಿಗ್ಗಿ, ಎಂ.ಎ.ರಷೀದ್, ಶ್ರೀನಿವಾಸರೆಡ್ಡಿ ಪಾಲಪ್, ಭೀಮಸಿಂಗ ಚವ್ಹಾಣ, ರಾಮಲಿಂಗ ಬಾನರ್, ವಿನೋದ ಗುತ್ತೇದಾರ, ಖಾಜಾ ಬಾದಲ್, ಶಿವುಕುಮಾರ ಯಾಗಾಪೂರ, ದೇವು ಯಾಬಾಳ, ಭೀಮರಾಯ ಹೊತಿನಮಡಿ, ವೆಂಕಟೇಶ್ ಕುಲಕರ್ಣಿ, ನಿಂಗಾರೆಡ್ಡಿ ಭೀಮನಳ್ಳಿ, ಸೂರ್ಯಕಾಂತ ಪೂಜಾರಿ, ಮಲ್ಲಿಕಾರ್ಜುನ ಮುಡಬೂಳಕರ್, ಸಂತೋಷ ಚೌದರಿ, ಬಾಗೇಶ್ ದೊರೆ, ಶಿವರಾಜ್ ಪಾಳೇದ್, ಅಹ್ಮದ್ ಸೇಠ್, ಶರಣು ಅರಣಕಲ್, ಸಂಜಯ್ ಬುಳಕರ್, ನಜೀರ್ ಆಡಕಿ, ರವಿಸಾಗರ ಹೊಸಮನಿ, ಗಂಗಾಧರ ಡಿಗ್ಗಿ, ವಿಠಲ್ ಕಟ್ಟಿಮನಿ, ರತನ್ ಕನ್ನಡಗಿ, ನಿಂಬಣ್ಣಗೌಡ ಪಾಟೀಲ, ಸುನೀಲ್ ಅಮ್ಮಗೋಳ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!