Oplus_0

ಇಂಡೋ ಜರ್ಮನ್ ಆಸ್ಪತ್ರೆ ವೈದ್ಯರಿಂದ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸಾ ಶಿಬಿರ, ಸದುಪಯೋಗ ಪಡೆದುಕೊಳ್ಳಲ ಮನವಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದಲ್ಲಿ ಡಾ. ಓಂ ಇಂಡೋ ಜರ್ಮನ್ ಆಸ್ಪತ್ರೆ ಹಾಗೂ ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ (ರಿ.), ಚಿತ್ತಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಈಗಾಗಲೇ 15 ರಿಂದ ಪ್ರಾರಂಭವಾದ ವೈದ್ಯರಿಂದ ವಿಶೇಷ ಶಸ್ತ್ರಚಿಕಿತ್ಸಾ ಶಿಬಿರ ನ.20 ರವರೆಗೆ ನಡೆಯಲಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜ್ಯೋತಿ ಸೇವಾ ಕೇಂದ್ರದ ಯೋಜನಾ ವ್ಯವಸ್ಥಾಪಕಿ ಸಿಸ್ಟರ್ ಲೂಸಿಪ್ರಿಯಾ ಹಾಗೂ ಸಿಬ್ಬಂದಿ ವರ್ಗ ಮತ್ತು ಇಂಡೋ ಜರ್ಮನ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಮನವಿ ಮಾಡಿದ್ದಾರೆ.

ಈ ಶಿಬಿರದಲ್ಲಿ ಅಪೆಂಡಿಕ್ಸ್, ಅಂಡವೃದ್ಧಿ (ಹೈಡ್ರೋಸೀಲ್), ಪೈಲ್ಸ್ (ಮೂಲವ್ಯಾಧಿ), ಹರ್ನಿಯಾ, ಸುಟ್ಟ ಗಾಯಗಳು ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಅದರಲ್ಲೂ ವಿಶೇಷವಾಗಿ ಶೀಳು ತುಟಿ, ಶೀಳು ಅಂಗುಳ ಮುಂತಾದ ಜನ್ಮಜಾತ ನ್ಯೂನತೆಗಳನ್ನು ಹೊಂದಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು, ವಿಶೇಷವಾಗಿ ಅಗತ್ಯವಿರುವ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾಯಿಸಲು ಮೊ.7090560912 ಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!