Oplus_0

ದೀಪಾವಳಿಯ ಲಕ್ಷ್ಮೀ ಪೂಜೆಗೆ ಖರ್ಚು ಮಾಡುವ ಹಣ ನಾಗಾವಿ ಗೋಶಾಲೆಗೆ ನೀಡಿದ ಬೊಮ್ಮನಳ್ಳಿ ಕಾರ್ಯ ಶ್ಲಾಘನೀಯ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ದೀಪಾವಳಿಯ ಲಕ್ಷ್ಮೀ ಪೂಜೆಗೆ ಖರ್ಚು ಮಾಡುವ ಹಣ ನಾಗಾವಿ ಗೋಶಾಲೆಗೆ ನೀಡಿದ ರಾಚಪ್ಪ ಬೊಮ್ಮನಳ್ಳಿ ಕಾರ್ಯ ಶ್ಲಾಘನೀಯ ಎಂದು ಗೋಶಾಲೆಯ ಅಧ್ಯಕ್ಷ ರಮೇಶ್ ಬೊಮ್ಮನಳ್ಳಿ ತಿಳಿಸಿದ್ದಾರೆ.

ಪಟ್ಟಣದ ವೀರಶೈವ ಸಮಾಜದ ಪ್ರಮುಖರು, ರಸ ಗೊಬ್ಬರ ವ್ಯಾಪಾರಿಗಳಾದ ರಾಚಪ್ಪ ನಿಂಗಪ್ಪ ಬೊಮ್ಮನಳ್ಳಿ ಇವರು ಪ್ರತಿವರ್ಷ ದೀಪಾವಳಿ ಗೆ ಮಾಡುವಂತಹ ಲಕ್ಷ್ಮಿ ಪೂಜೆಯನ್ನು ಈ ವರ್ಷ ಅತ್ಯಂತ ಸಾಧಾರಣವಾಗಿ ಕಡಿಮೆ ಖರ್ಚಿನಲ್ಲಿ ಪೂಜೆಯನ್ನು ನೆರವೇರಿಸಿ ಅದಕ್ಕೆ ಖರ್ಚು ಮಾಡುವ ಹಣವನ್ನು ಗೋಶಾಲೆ ಗೆ ನೀಡಿರುವುದು ಮಾದರಿ ಎಂದು ಹೇಳಿದ್ದಾರೆ.

ಮಳೆ ಇಲ್ಲದ ಕಾರಣ ಭೂಮಿಯ ಮೇಲಿನ ಎಲ್ಲಾ ಜೀವಜಂತುಗಳಿಗೂ (ಮನುಷನೊಳಗೊಂಡು) ಸಂಕಷ್ಟದ ದಿನಗಳಿವು ಎನ್ನುವುದನ್ನು ಅರಿತಿರುವ ಶ್ರೀಯುತರು ಆಡಂಬರದ ಖರ್ಚನ್ನು ಮಾಡದೆ ಅದೇ ಹಣವನ್ನು ಶ್ರೀ ನಾಗಾವಿ ಸೇವಾ ಪ್ರತಿಷ್ಠಾನದ ಶ್ರೀ ನಾಗಾವಿ ಗೋಶಾಲೆಯ ಹಸುಗಳ ಮೇವಿಗಾಗಿ ಹಣವನ್ನು ಕೊಟ್ಟಿರುತ್ತಾರೆ. ಇಂತಹ ಔದಾರ್ಯದ ಹೃದಯವುಳ್ಳ ಯುವಕರು ಇಂದಿನ ಸಮಾಜಕ್ಕೆ ತುಂಬಾ ಅವಶ್ಯವಿದೆ ಎಂದು ಹೇಳಿದ್ದಾರೆ.

ರಾಚಪ್ಪ ಬೊಮ್ಮನಳ್ಳಿ ಅವರ ಸಮಾಜಮುಖಿ ಕಾರ್ಯಕ್ಕೆ ಶ್ರೀ ನಾಗಾವಿ ಸೇವಾ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳ ವತಿಯಿಂದ ಕೃತಜ್ಞತೆಗಳು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ರಾಜೇಶ್ ದೇಶಪಾಂಡೆ, ಸಂತೋಷ ಹಾವೇರಿ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!