Oplus_0

ಇಂಗನಕಲ್ ಗ್ರಾಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನಾಚರಣೆ  | ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಅವರಿಂದ ಶೈಕ್ಷಣಿಕ ಕ್ರಾಂತಿ: ಹೊಸಮನಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕ್ಷೇತ್ರದ ಶಾಸಕರು ಗೃಹ, ಐಟಿಬಿಟಿ ಮತ್ತು ಇ-ಅಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಿಂದುಳಿದ ಕ್ಷೇತ್ರ ಎನಿಸಿಕೊಂಡಿರುವ ಚಿತ್ತಾಪುರವನ್ನು ಅಭಿವೃದ್ಧಿ ಪಡಿಸಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಠಿಸಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಇಂಗನಕಲ್ ಹೇಳಿದರು.

ತಾಲೂಕಿನ ಇಂಗನಕಲ್ ಗ್ರಾಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ 48 ನೇ ಜನ್ಮದಿನದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಪೆನ್ನು, ನೋಟ್ ಬುಕ್, ಕಂಪಾಸ್ ಮತ್ತು ಪುಸ್ತಕ ವಿತರಿಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ ಎಂದರು.

ಚಿತ್ತಾಪುರ ಹಾಗೂ ವಾಡಿ ಪಟ್ಟಣದಲ್ಲಿ ಬೃಹತ್ ಶಿಕ್ಷಣ ಹಬ್ಬ ನಿರ್ಮಿಸಿದ್ದಾರೆ, ಬಡವರ ಪರ ಹಾಗೂ ಅಭಿವೃದ್ಧಿ ಪರವಾಗಿದ್ದಾರೆ ಇಂತಹ ಸಚಿವರನ್ನು ಈ ಕ್ಷೇತ್ರದ ಮತದಾರರು ಹ್ಯಾಟ್ರಿಕ್ ಗೆಲುವು ಸಾಧಿಸಲು ಅನುಕೂಲ ಮಾಡಿ ಕೊಟ್ಟಿದ್ದರಿಂದ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೈಹಿಡಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹುಟ್ಟುಹಬ್ಬದ ನೆಪದಲ್ಲಿ ದುಂದು ವೆಚ್ಚ ಮಾಡದೇ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಬಡವರಿಗೆ, ನಿರ್ಗತಿಕರಿಗೆ ಅನುಕೂಲವಾಗಲಿ ಎಂಬ ಸಚಿವರ ಆಶಯದಂತೆ ಇಂಗನಕಲ್ ಗ್ರಾಮದಲ್ಲಿ ಅರ್ಥಪೂರ್ಣವಾಗಿ ಜನ್ಮ ದಿನವನ್ನು ಆಚರಿಸಲಾಗಿದೆ ಎಂದು ಹೇಳಿದರು.

ಕೆಲವರು ರಾಜಕಾರಣದಲ್ಲಿ ಬಂದು ಗೆಲುವು ಸಾಧಿಸಿದ ಕೂಡಲೇ ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಕನ್ನುವ ಸ್ವಾರ್ಥ ರಾಜಕಾರಣ ಮಾಡುತ್ತಾರೆ. ಆದರೆ ಪ್ರಿಯಾಂಕ್ ಖರ್ಗೆ ಮಾತ್ರ ಯಾವುದೇ ಸ್ವಾರ್ಥ ರಾಜಕಾರಣ ಮಾಡದೇ ಎಲ್ಲ ಜನಾಂಗದವರು ನಮ್ಮವರು, ಅವರ ಏಳಿಗೆಯೇ ನನ್ನ ಏಳಿಗೆ ಎಂದು ತಿಳಿದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ, ಕಂಪಾಸ್, ಪರೀಕ್ಷೆಯ ಪ್ಯಾಡ್, ಕಲೆಯ ಪುಸ್ತಕ, ನೋಟ್ ಬುಕ್, ಕನ್ನಡ, ಹಿಂದಿ, ಇಂಗ್ಲಿಷ್ ಅಂಕಲಿಪಿಗಳು, ಅಂಗನವಾಡಿ ಮಕ್ಕಳಿಗೆ ಸ್ಲೇಟ್, ಪೆನ್ಸಿಲ್, ಸಿಹಿ ವಿತರಿಸಲಾಯಿತು. ಮುಖಂಡರಾದ ಅನಿಲಕುಮಾರ ಹುಣಚಿಕರ್, ನಾಗರಾಜ ಗಾಯಕವಾಡ, ಪ್ರಭುಲಿಂಗ ಮಂಗಲಗಿ ಅವರು ಮಾತನಾಡಿದರು.

ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ದಂಡೆ, ಪ್ರಮುಖರಾದ ಸಿದ್ದಣ್ಣ ಮಗಿ, ನಾಗರಾಜ್ ಬಂಡಿವಡ್ಡರ್, ದೇವಾನಂದ್ ಮಂಗಲಗಿ, ರೇವಣಸಿದ್ಧ ಹಡಪದ್, ರೇವಣಸಿದ್ಧ ಮಂಗಲಗಿ, ಸುನೀಲ ಮಂಗಲಗಿ, ಮಲ್ಲಪ್ಪ ಕಂದಗೋಳ, ಮಹಾದೇವ್ ಮಹಾಗಾಂವಕರ್, ಮನೋಹರ್ ಕಟ್ಟಿಮನಿ, ದೀಪಕ ಹೊಸ್ಮನಿ, ಕಾಶಿನಾಥ ಬೆಳಗುಂಪಾ, ಶರಣಪ್ಪ ಕದ್ದರಗಿ, ಚಂದ್ರಶೇಖರ ಕೊರಬಾ, ಶಿವಯೋಗಿ ಹೊಸಮನಿ, ರಫೀಕ್ ದುಕಾನದಾರ್ ಸೇರಿದಂತೆ ಇತರರು ಇದ್ದರು.

ಮಲ್ಕಪ್ಪ ತೆಂಗಳಿ ನಿರೂಪಣೆ ಮಾಡಿದರು. ಪರಮೇಶ್ವರ್ ಬೆನಕನಪಳ್ಳಿ ಸ್ವಾಗತಿಸಿದರು, ಹಾಜಿಸಾಬ್ ದುಕಾನದಾರ್ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!