Oplus_0

ಚಿತ್ತಾಪುರದಲ್ಲಿ ರಾಷ್ಟ್ರೀಯ ಗೋರ ಸೇನಾ ವತಿಯಿಂದ ನ.24 ರಂದು ಯುವ ಘರ್ಜನೆ ಸಮಾವೇಶ, ನ.25 ರಂದು ಪಥ ಸಂಚಲನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ರಾಷ್ಟ್ರೀಯ ಗೋರ ಸೇನಾ ಸಂಘಟನೆಯ ವತಿಯಿಂದ ಇದೇ ನ.24 ರಂದು ಯುವ ಘರ್ಜನೆ ಸಮಾವೇಶ ಹಾಗೂ ನ.25 ರಂದು ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇಹರು ಜಾಠೋತ್ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನ.24 ರಂದು ಸಾಯಂಕಾಲ 4 ಗಂಟೆಗೆ ಸಮಾಜ ಜಾಗೃತಿ ಹಾಗೂ ಸಂಸ್ಕೃತಿ ಪ್ರಸಾರದ ಕುರಿತು ವಿಚಾರಗೋಷ್ಠಿ ಹಾಗೂ ಗೋರ ಬಂಜಾರಾ ಸಾಂಪ್ರದಾಯಿಕ ಭಜನೆ ಕಾರ್ಯಕ್ರಮ ಮತ್ತು ಬಂಜಾರಾ ಸಮಾಜದ ಯುವಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಸಲುವಾಗಿ ತಾಲೂಕು ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನ.25 ರಂದು ಬೆಳಿಗ್ಗೆ 11 ಗಂಟೆಗೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗುವ ಯುವ ಘರ್ಜನೆ ಪಥ ಸಂಚಲನ ಬಸ್ ನಿಲ್ದಾಣ ರಸ್ತೆ, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಈಶ್ವರಗುಡಿ ಮಾರ್ಗವಾಗಿ ಸ್ವಾಮಿ ಟಿಫಿನ್ ಸೆಂಟರ್, ಕಪ್ಪಡಾ ಬಜಾರ್, ಜನತಾ ವೃತ್ತ, ನಾಗಾವಿ ವೃತ್ತ, ರೈಲ್ವೆ ಸ್ಟೇಷನ್ ಸೇವಾಲಾಲ್ ವೃತ್ತ, ರಾಘವೇಂದ್ರ ಹೋಟೆಲ್,  ಕೆನರಾ ಬ್ಯಾಂಕ್ ಮಾರ್ಗವಾಗಿ ಕಾಶಿ ಗಲ್ಲಿಯಿಂದ ಬಸ್ ನಿಲ್ದಾಣ ರಸ್ತೆ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಲಿದೆ. ನಂತರ ವೇದಿಕೆ ಕಾರ್ಯಕ್ರಮ ಸಾರ್ವಜನಿಕವಾಗಿ ಸಾಮೂಹಿಕ ಭೋಗ ಕಾರ್ಯಕ್ರಮ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಒಂದು ತಾಂಡಾ ಹತ್ತು ಯುವಪಡೆ ಅಭಿಯಾನ ಚಾಲನೆ ನೀಡುವ ನಿಟ್ಟಿನಲ್ಲಿ ಗೋರ ಸಮಾಜದಲ್ಲಿ ಧಾರ್ಮಿಕತೆ ಮಹತ್ವದ ಕುರಿತು ಅರಿವು ಮೂಡಿಸುವುದು, ಸಮಾಜ ಸೇವೆ ಮತ್ತು ಸಂಘಟನೆ, ವ್ಯಸನ ಮುಕ್ತ ತಾಂಡಾ ನಿರ್ಮಾಣ, ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣ, ರಾಷ್ಟ್ರದ ಪವಿತ್ರ ಗ್ರಂಥ ಸಂವಿಧಾನದ ಅರಿವು ಮೂಡಿಸುವುದು ಯುವ ಘರ್ಜನೆ ಸಮಾವೇಶದ ಮುಖ್ಯ ಉದ್ದೇಶ ಎಂದು ಹೇಳಿದರು.

ತಾಲೂಕು ಅಧ್ಯಕ್ಷ ವಿಜಯಕುಮಾರ ಚವ್ಹಾಣ ಯಾಗಾಪೂರ ಮಾತನಾಡಿ, ಯುವ ಘರ್ಜನೆ ಕಾರ್ಯಕ್ರಮ ಪಕ್ಷಾತೀತವಾಗಿ ಹಾಗೂ ಬಂಜಾರ ಸಮಾಜದವರು ಎಲ್ಲರೂ ಒಗ್ಗೂಡಿ ಮಾಡುವ ಕಾರ್ಯಕ್ರಮವಾಗಿದೆ. ಎರಡು ದಿನಗಳ ಕಾಲ ಚಿತ್ತಾಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ, ಹೀಗಾಗಿ ಪಟ್ಟಣದ ಎಲ್ಲ ಸಮಾಜದವರು ಸಹಕರಿಸಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ ಚವ್ಹಾಣ, ಮುಖಂಡರಾದ ಗೋಪಾಲ ರಾಠೋಡ, ರಮೇಶ್ ಕಾರಬಾರಿ, ಜಗದೀಶ್ ಚವ್ಹಾಣ, ಅಶ್ವಥ್ ರಾಠೋಡ, ದೇವಿದಾಸ ಚವ್ಹಾಣ, ಶಿವರಾಮ್ ಚವ್ಹಾಣ, ಸುಭಾಷ್ ಜಾಧವ್, ಮೂರ್ತಿ ಚವ್ಹಾಣ, ಮನೋಜ್ ರಾಠೋಡ, ಲಿಂಬಾಜಿ ರಾಠೋಡ, ಗಣೇಶ ಚವ್ಹಾಣ, ಸೋಮಸಿಂಗ ರಾಠೋಡ, ರವಿ ಜಾಧವ್, ಕಿಶನ್ ಜಾಧವ್, ತುಕಾರಾಮ ರಾಠೋಡ, ಶ್ರೀಕಾಂತ್ ರಾಠೋಡ, ಆನಂದ ಜಾಧವ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!