ದಿ. ಸುರೇಶ್ ಗುತ್ತೇದಾರ ಕುಟುಂಬಕ್ಕೆ ನಮ್ಮ ಕರ್ನಾಟಕ ಸೇನೆಯಿಂದ ಸಾಂತ್ವನ | ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ಸ್ಮರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಇತ್ತೀಚೆಗೆ ನಿಧನರಾದ ನಮ್ಮ ಕರ್ನಾಟಕ ಸೇನೆಯ ಕಲ್ಯಾಣ ಕರ್ನಾಟಕ ರೈತ ಘಟಕದ ಅಧ್ಯಕ್ಷ ದಿ. ಸುರೇಶ್ ಗುತ್ತೇದಾರ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಉದ್ದೇಶದಿಂದ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಎಂ. ಬಸವರಾಜ್ ಪಡುಕೋಟೆ ಅವರು ಹಾಗೂ ಸಂಘಟನೆಯ ಪದಾಧಿಕಾರಿಗಳು ಗುರುವಾರ ಚಿತ್ತಾಪುರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದಿ. ಸುರೇಶ್ ಗುತ್ತೇದಾರ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಅವರ ದುಃಖದಲ್ಲಿ ಸಂಘಟನೆ ಸದಾ ಜೊತೆಯಾಗಿರುತ್ತದೆ ಎಂಬ ಭರವಸೆ ನೀಡಿದರು.
ಸಂಘಟನೆಯ ಬೆಳವಣಿಗೆ ಹಾಗೂ ರೈತರ ಹಿತಕ್ಕಾಗಿ ದಿ. ಸುರೇಶ್ ಗುತ್ತೇದಾರ ಅವರು ಸಲ್ಲಿಸಿದ ಸೇವೆ ಮತ್ತು ಸಂಘಟನೆಯ ಮೇಲಿನ ಅವರ ನಿಷ್ಠೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಒಬ್ಬ ನಿಷ್ಠಾವಂತ ಸಂಘಟನೆಯ ಕಾರ್ಯಕರ್ತ ಹಾಗೂ ರೈತಪರ ಹೋರಾಟಗಾರನನ್ನು ಕಳೆದುಕೊಂಡಿರುವುದು ನಮ್ಮ ಕರ್ನಾಟಕ ಸೇನೆಗೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯಾಧ್ಯಕ್ಷರು ಸಂತಾಪ ವ್ಯಕ್ತಪಡಿಸಿದರು.
ದಿ.ಸುರೇಶ್ ಗುತ್ತೇದಾರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ನಮ್ಮ ಕರ್ನಾಟಕ ಸೇನೆಯ ಸಮಸ್ತ ಪದಾಧಿಕಾರಿಗಳು ಪ್ರಾರ್ಥಿಸಿದರು. ರಾಜ್ಯ ಪ್ರಧಾನ ಸಂಚಾಲಕರ ಭೀಮಣ್ಣ ಶಾಖಾಪುರ್, ಜಿಲ್ಲಾಧ್ಯಕ್ಷ ರುಕ್ಮಯ್ಯ ಗುತ್ತೇದಾರ ಕಲ್ಬುರ್ಗಿ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ, ವಾಡಿ ಅಧ್ಯಕ್ಷ ಸಿದ್ದು ಪೂಜಾರಿ, ರೈತ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭು ಹಲಕರ್ಟಿ, ಉಪಾಧ್ಯಕ್ಷ ಕರಣು ಅಲ್ಲೂರ, ಪ್ರಭು ಪೂಜಾರಿ, ನಾಗರಾಜ್ ಬನ್ಸೋಡೆ, ಸಲೀಂ ಶೇಕ್, ಶ್ರೀಕಾಂತ್ ದೊಡ್ಡಮನಿ, ಭೀಮಯ್ಯ ಗುತ್ತೇದಾರ, ದೇವು ಪೂಜಾರಿ, ಪಾಂಡು ಠಾಣೆದರ್ ಮತ್ತು ನಮ್ಮ ಕರ್ನಾಟಕ ಸೇನೆ ಳಯ ಸೇನಾನಿಗಳು ಇದ್ದರು.
