ಕೊಡದೂರ ಮರಗಮ್ಮ ದೇವಸ್ಥಾನದ ಗೋಪುರ ಶಿಖರ, ಕಳಸಾರೋಹಣ ಕಾರ್ಯಕ್ರಮ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ಕೊಡದೂರ ಗ್ರಾಮದಲ್ಲಿ ಆದಿಶಕ್ತಿ ಮರಗಮ್ಮ ದೇವಸ್ಥಾನ ಇರುವುದರಿಂದ ಎಲ್ಲರ ಮನ ಮತ್ತು ಮನೆಗಳಲ್ಲಿ ಶ್ರದ್ಧೆ ಭಕ್ತಿ ತುಂಬಿದ ತಾಣವಾಗಿದೆ ಎಂದು ಭರತನೂರ ವಿರಕ್ತ ಮಠದ ಶ್ರೀ ಚಿಕ್ಕಗುರುನಂಜೇಶ್ವರ ಶಿವಯೋಗಿಗಳು ಹೇಳಿದರು.
ತಾಲೂಕಿನ ಕೊಡದೂರ ಗ್ರಾಮದ ಆರಾಧ್ಯದೈವ ಆದಿಶಕ್ತಿ ಮರಗಮ್ಮ ದೇವಸ್ಥಾನದ ಗೋಪುರ ಖಳಸಾರೋಹಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೊಡದೂರ ಗ್ರಾಮ ಧಾರ್ಮಿಕ ಪುಣ್ಯ ಕ್ಷೇತ್ರ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಮೈಸೂರು ಟಿ.ನರಸೀಪುರ ಉರಿಲಿಂಗ ಪೆದ್ದಿ ಸಂಸ್ಥಾನದ ಪೂಜ್ಯ ಜ್ಞಾನಪ್ರಾಕಾಶ ಸ್ವಾಮಿಜಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿ ಮಾಡಿರಿ. ಜೀವನ ಸಾರ್ಥಕತೆದಡೆ ಸಾಗಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯಕತೆ ಇದೆ. ಅದರಲ್ಲಿ ಮುಖ್ಯವಾಗಿ ಸಂಸ್ಕಾರ ಮುಖ್ಯವಾಗಿದೆ ಎಂದು ಹೇಳಿದರು.
ಮಂಗಲಗಿ ಪೂಜ್ಯ ಡಾ.ಶಾಂತಸೋನಾಥ ಶಿವಾಚಾರ್ಯ, ತೋಟ್ನನಳ್ಳಿಯ ತ್ರಿಮೂರ್ತಿ ಶಿವಾಚಾರ್ಯ,ಉರಿಲಿಂಗ ಪೆದ್ದಿ ಶ್ರೀ, ಸುಗೂರ(ಕೆ) ಡಾ.ಚನ್ನರುದ್ರಮುನಿ ಶಿವಾಚಾರ್ಯ, ಗ್ರಾಪಂ ಅಧ್ಯಕ್ಷೆ ಮಂಜುಳಾ ಮಲ್ಲಪ್ಪ ದಿಗ್ಗಾವ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ಮಜ್ಜಿಗಿ, ಶಿವಶಂಕರಯ್ಯ ಸ್ಥಾವರಮಠ ಕೊಡದೂರ, ಸಿದ್ದಲಿಂಗ ಸಾಹು ರಾಜಾಪುರ, ಸಿದ್ದಪ್ಪ ಸಾಹು ನಿಂಗದಳ್ಳಿ, ಡಾ.ಶಿವನಾಂದ ಮಜ್ಜಿಗಿ, ಭೀಮಾಶಂಕರ ಮಾಲಿಪಾಟೀಲ, ಸಿದ್ದಣಗೌಡ ಪಾಟೀಲ, ಗಣಪತಿ ಹಾಳಕಾಯಿ, ಮಾಜಿ ಗ್ರಾಪಂ ಅಧ್ಯಕ್ಷ ಗಂಗಾಧರ ಮೈಲಾರ, ಪ್ರಶಾಂತ ರಾಜಾಪುರ, ಬಂಡು ಗದ್ದಿ,ಆನಂದ ಮಂಗೊಂಡ, ಪ್ರಕಾಶ ಮೇಲ್ಕೇರಿ, ಗ್ರಾಮ ಬಡಿಗ ಚನ್ನಪ್ಪ ವಿಶ್ವಕರ್ಮ, ಶ್ರೀನಿವಾಸ ಕುಲಕರ್ಣಿ, ಶರಣು ಚಂದಾ,ಬಸವರಾಜ ಜೀವಣಗಿ, ಹಣಮಂತರಾವ ಕುಲರ್ಣಿ, ನಿವೃತ್ತ ಶಿಕ್ಷಕ ಶಿವಶರಣಪ್ವ ಚಿನ್ನ, ಅವಿನಾಶ್ ಮೂಲಿಮನಿ, ಪರಮೇಶ್ವರ ಚಂದಾ, ಮರಲಿಂಗ ಮೇಲ್ಕೆರಿ, ಮಡಿವಾಳಪ್ಪ ಗುಂಡಗುರ್ತಿ, ಶರಣು ಚಂದಾ, ಡಾ.ಪ್ರಕಾಶ ತಡಕಲ, ನಾಗೇಂದ್ರಪ್ಪ ಪೇಚೆಟ್ಟಿ, ರಾಜೇಶಖರ ರಾಜಾಪುರ, ಬಸವರಾಜ ಹಾವಗೋಳ, ಶೇಖರ ಕರಿಮಗೋಳ, ಅಂಬು ಜಾಧವ್, ನಿಂಗಪ ಖಾಜಾಪುರ, ಪಿಡಿಒ ಟೇಲಸನ, ವಿರೇಶ ಈಶ್ವಗೊಂಡ,ರಮೇಶ ಜನಗೊಂಡ, ಮಲ್ಲಪ್ಪ ಪೋಲಕಪಳ್ಳಿ, ಬಸವರಾಜ ಮೇಲ್ಕೇರಿ, ವಿಕಾಸ ಜನಗೊಂಡ, ಸಂತೋಷ ಪಾಟೀಲ ಮಂಗಲಗಿ, ಸೂರ್ಯಕಾಂತ ಕಲ್ಲೂರ, ಮಲ್ಲಿಕಾರ್ಜುನ, ಚಂದ್ರಕಾಂತ ರಾಠೋಡ, ಗುಂಡಪ್ಪ ಮಾಳಗಿ, ಜಗದೀಶ್ ಮಂಗೋಂಡ, ನೀಲಕಂಠ ಪೇಚೆಟ್ಟಿ, ಜನರ್ದನ ಖದ್ದರ್ಗಿ, ಶಿವಯೋಗಿ ಗಡ್ಡಿಮನಿ ಕೋಡ್ಲಾ, ನಾಗಪ್ಪ ಹಲಗಿ, ಚಂದ್ರಕಾಂತ ಭೂಮಣ ಇದ್ದರು. ಮಾಣಿಕಮ್ಮ ಸ್ವಾಗತಿಸಿದರು, ಅವಿನಾಶ್ ಮೂಲಿಮನಿ ನಿರೂಪಿಸಿ ವಂದಿಸಿದರು.