ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಭಕ್ತ ಕನಕದಾಸರ ಜಯಂತಿ ಆಚರಣೆ, ಕುರುಬ ಸಮಾಜದವರು ರಾಜಕೀಯ ಬದಿಗಿಟ್ಟು ಸಂಘಟಿತರಾಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕುರುಬ ಸಮಾಜದವರು ರಾಜಕಾರಣವನ್ನು ಬದಿಗಿಟ್ಟು ಎಲ್ಲರೂ ಸಂಘಟಿತರಾಗಬೇಕು ನಿವೃತ್ತ ಶಿಕ್ಷಕ ಸಿದ್ರಾಮಪ್ಪ ಕುಕ್ಕುಂದಿ ಸೇಡಂ ಕರೆ ನೀಡಿದರು
ತಹಸೀಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಸಮಾಜದ ಸಭೆ ಸಮಾರಂಭಗಳಲ್ಲಿ ಎಲ್ಲರೂ ಅಭಿಮಾನ ಮತ್ತು ಸ್ವಾಭಿಮಾನದಿಂದ ಭಾಗವಹಿಸಿ ಶಕ್ತಿ ಪ್ರದರ್ಶನ ತೋರಬೇಕು ಎಂದು ಹೇಳಿದರು.
ಭಕ್ತಿ, ಶ್ರದ್ದೆ ವಿಚಾರ ಇದ್ದಾಗ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು ಜಾತಿ ಬಗ್ಗೆ ಅಭಿಮಾನ ಇರಬೇಕು ನಮ್ಮ ಕುರುಬ ಸಮಾಜದಲ್ಲಿ ಆಗಿ ಹೋದವರ ಬಗ್ಗೆ ಸ್ಮರಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳಿಗಾಗಿ ಸಂಪತ್ತು ಮಾಡುವ ಮೊದಲು ಒಳ್ಳೆಯ ಸಂಸ್ಕಾರ ನೀಡಬೇಕು. ತನ್ನ ತಾನು ಅರಿತವನು ಮಹಾತ್ಮಾನಾಗುತ್ತಾನೆ ಹೀಗಾಗಿ ಎಲ್ಲರೂ ಕನಕದಾಸರ ತತ್ವ ವಿಚಾರಗಳು ಅರಿತುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ್ದಾರೆ, ಯಾರೂ ಮೇಲಲ್ಲ ಕೀಳಲ್ಲ ಎಲ್ಲರೂ ಸಮಾನರು ಎಂದು ತಿಳಿಸಿದ್ದಾರೆ. ಬಾಲಕ ಪೃಥ್ವಿರಾಜ್ ಪೂಜಾರಿ ಮೊಗಲಾ ಮಾಡಿದ ಭಾಷಣಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಸಿಡಿಪಿಒ ಆರತಿ ತುಪ್ಪದ್, ಪಶು ವೈದ್ಯಾಧಿಕಾರಿ ಡಾ.ಶಂಕರ ಕಣ್ಣಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ್ ನಾಯ್ಕೋಡಿ, ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವಸಂತ ಮೂರ್ತಿ, ವಿಠಲ್ ರಾವ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪಿಎಸ್ಐ ಚಂದ್ರಾಮಪ್ಪ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ, ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ರಾಜಣ್ಣ ಕರದಾಳ, ರಾಮಲಿಂಗ ಬಾನರ್, ಪಭು ಗಂಗಾಣಿ, ಜುಮ್ಮಣ್ಣ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಯಲ್ಲಾಲಿಂಗ ಪೂಜಾರಿ ಮುಗುಟಾ, ಸುನೀಲ್ ಅಮ್ಮಗೊಳ, ಸಂತೋಷ ಪೂಜಾರಿ, ರಾಕೇಶ್ ಪೂಜಾರಿ, ಭೋಜರಾಜ್, ಪ್ರದೀಪ್ ಕದ್ದರಗಿ, ಸಿದ್ದು ಪೂಜಾರಿ ಸೇರಿದಂತೆ ತಹಸೀಲ್ ಕಚೇರಿಯ ಸಿಬ್ಬಂದಿಗಳು ಹಾಗೂ ಕುರುಬ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.