ಚಿತ್ತಾಪುರದಲ್ಲಿ ಮೋಬೈಲ್ ಮೇಡಿಕಲ್ ಯುನೀಟ್ ಗೆ ಚಾಲನೆ, ಗ್ರಾಮೀಣ ಭಾಗದ ಜನರು ಸದುಪಯೋಗ ಪಡೆದುಕೊಳ್ಳಲು ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆರೋಗ್ಯ ರಥದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಹೊಂದಿರುವ ಬಸ್ ಇದಾಗಿದ್ದು ಇದರಲ್ಲಿ ಕಣ್ಣಿನ ತಪಾಸಣೆ, ಹಲ್ಲಿನ ತಪಾಸಣೆ ಸೇರಿದಂತೆ ಎಲ್ಲಾ ತರಹದ ತಪಾಸಣೆ ಮಾಡಲಾಗುತ್ತಿದೆ ಅಲ್ಲದೆ ಟೇಲಿ ಮೇಡಿಷನ್ ಗಳಂತಹ ಸೇವೆಗಳು ಉಚಿತವಾಗಿ ಲಬ್ಯವಿದ್ದು ಇದು ಗ್ರಾಮಿಣ ಭಾಗದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಬಹಳ ಉಪಯುಕ್ತವಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಟರ್ ಸ್ವಯಂಸೇವಕ ಸಂಘದ ಭಾರತದ ಮುಖ್ಯಸ್ಥ ರೋಹನ್ ಫ್ರ್ಯಾಂಕೋ ಕರೆ ನೀಡಿದರು.
ಪಟ್ಟಣದ ಜ್ಯೋತಿ ಸೇವಾ ಕೇಂದ್ರದಲ್ಲಿ ಓಂ ಇಂಡೋ ಜರ್ಮನ್, ಆಸ್ಟರ್ ಹೇಲ್ತ್ ಕೇರ್, ಸಿಎಸ್ಆರ್ ಹೆಲ್ತ್ ಕೇರ್, ಅಶೋಕ ಲೇಲಾಂಡ್ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೋಬೈಲ್ ಮೇಡಿಕಲ್ ಯುನೀಟ್ ವಾಹನದ ಚಾಲನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ದೇಶದ ಅತಿ ದೊಡ್ಡ ಕಂಪನಿಯಾದ ಅಶೋಕ ಲೇಲಾಂಡ್ ಕಂಪನಿಯು ಮೋಬೈಲ್ ಮೇಡಿಕಲ್ ಯುನೀಟ್ ಎಂಬ ಆರೋಗ್ಯ ರಥದ ಸೇವೆಯನ್ನು ನೀಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಅಶೋಕ್ ಲೇಲಾಂಡ್ ಕಂಪನಿಯ ಮುಖ್ಯಸ್ಥ ಶಶಿಕುಮಾರ ಮಾತನಾಡಿ, ನಮ್ಮ ಕಾರ್ಪೋರೇಟ್ ಉದ್ಯಮ ಸಿಎಸ್ಆರ್ ಅಡಿಯಲ್ಲಿ ಶಿಕ್ಷಣ ಆರೋಗ್ಯ, ಸಾಮಾಜಿಕ ಸೇವೆ ಮತ್ತು ಕುಡಿಯುವ ನೀರಿಗಾಗಿ ಅನುದಾನವನ್ನು ಮೀಸಲಿಡುತ್ತಿದ್ದು ಅದರ ಅಡಿಯಲ್ಲಿ ಭಾರತದಲ್ಲಿ ಅಶೋಕ್ ಲೇಲಾಂಡ್ ಕಂಪನಿಯ 12 ಯುನೀಟ್ ಗಳಿದ್ದು ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದ ಚಿತ್ತಾಪುರ ತಾಲೂಕಿನಲ್ಲಿ ಮೋದಲನೆಯದಾಗಿದ್ದು ಇದು ಮುಂದಿನ ಹತ್ತು ವರ್ಷಗಳ ಕಾಲ ಉಚಿತ ಸೇವೆ ಸಲ್ಲಿಸಲಿದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಬೇಥನಿ ಸಂಸ್ಥೆಯ ಸಹಾಯಕ ಮುಖ್ಯಸ್ಥೆ ಸಿಸ್ಟರ್ ಶಾಂತಿ ಪ್ರಿಯಾ ಮಾತನಾಡಿ, ಅತಿ ಹಿಂದುಳಿದ ಪ್ರದೇಶವಾದ ಚಿತ್ತಾಪುರ ತಾಲೂಕಿನಲ್ಲಿ ಕಳೆದ ನಲವತ್ತೈದು ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕವಾಗಿ ಅನೇಕ ಮಕ್ಕಳಿಗೆ, ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಲು ನಮ್ಮ ಸಂಸ್ಥೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ, ಈಗ ನಮ್ಮೊಂದಿಗೆ ಸಾಮಾಜಿಕವಾಗಿ ಸೇವೆ ಸಲ್ಲಿಸಲು ಈ ಮೋಬೈಲ್ ಯುನಿಟ್ ಎಂಬ ಆರೋಗ್ಯ ರಥ ನಮ್ಮೊಂದಿಗೆ ಕೈ ಜೋಡಿಸುವ ಮೂಲಕ ಇನ್ನಷ್ಟು ಸಹಕಾರಿಯಾಗಿದ್ದು ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಎಲ್ಲಿ ಸಂಸ್ಥೆಗಳಿಗೂ ಅಭಿನಂದನೆ ಸಲ್ಲಿಸಿದರು.
ಧಾರವಾಡದ ಸಿಸ್ಟರ್ ಶಲ್ಯಾ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್, ಹಿರಿಯ ನ್ಯಾಯವಾದಿ ಚಂದ್ರಶೇಖರ ಅವಂಟಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅಶೋಕ್ ಲೇಲಾಂಡ್ ಕಂಪನಿಯ ಕೃಷ್ಣ ಶಂಕರ್, ವೆಂಕಟ್ ಸುಬ್ರಮಣ್ಯನ್, ಅನೀಲ್ ಕೋಂಡಂಬಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ್, ಸಿಡಿಪಿಓ ಆರತಿ ತುಪ್ಪದ್, ಸಿಸ್ಟರ್ ಶ್ಯಾಂಡ್ರಾ ಮಾರಿಯಾ, ಸಿಸ್ಟರ್ ಮರಿಯಾ, ಡಾ. ವಿಶ್ವಲತಾ, ಸಿದ್ದಮ್ಮ, ಮಹಾದೇವ ಅಂಗಡಿ, ಮಂಜುನಾಥ, ಭಾಗ್ಯಲಕ್ಷ್ಮಿ, ಮಂಜುನಾಥ ಸೇರಿದಂತೆ ಶಾಲೆಯ ಶಿಕ್ಷಕರು ಫಲಾನುಭವಿಗಳು ಮತ್ತು ಮಕ್ಕಳು ಇದ್ದರು.
ಶಿಶುವಿಹಾರ ಶಾಲೆಯ ಮಕ್ಕಳಿಂದ ಪ್ರಾರ್ಥನೆ ಮತ್ತು ಸ್ವಾಗತ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು, ರುದ್ರಪ್ಪ ತಾವರೆ ನಿರೂಪಿಸಿದರು, ಆನಂದ ಮುಕ್ತೇದಾರ ಸ್ವಾಗತಿಸಿದರು, ಸಾಯಬಣ್ಣ ಮಳಖೇಡ ವಂದಿಸಿದರು.