ಸೇಡಂ ವಾಸವದತ್ತ ವಿದ್ಯಾ ವಿಹಾರದಲ್ಲಿ ಅದ್ದೂರಿಯ ರಾಜ್ಯೋತ್ಸವ
ನಾಗಾವಿ ಎಕ್ಸಪ್ರೆಸ್
ಸೇಡಂ: ಪಟ್ಟಣದ ಪ್ರತಿಷ್ಠಿತ ಶಾಲೆಯಾದ ವಾಸವದತ್ತ ವಿದ್ಯಾ ವಿಹಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಪ್ರಾಚಾರ್ಯ ವೀಣಾರಡ್ಡಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಹೂಮಾಲೆ ಹಾಕಿ ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ವಿವಿಧ ಸಂಸ್ಕೃತಿಗಳಿಂದ ಕೂಡಿದ ಬಹು ಶ್ರೀಮಂತ ನಾಡು. ಇಲ್ಲಿನ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಮಾನವ ಕುಲಕ್ಕೆ ಮಾರ್ಗದರ್ಶನ ನೀಡುತ್ತವೆ. ಇಂತಹ ಭಾಷೆ ಬಳಸುವುದರ ಮೂಲಕ ಉಳಿಸಿ ಬೆಳೆಸಬೇಕು ವಿದ್ಯಾರ್ಥಿಗಳು ಶುದ್ಧ ಗ್ರಾಂಥಿಕ ಭಾಷೆ ಬಳಸುವುದರ ಮೂಲಕ ಭಾಷೆ ಶ್ರೀಮಂತ ಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ವಿಜಯಕುಮಾರ್ ಎಚ್, ಸಂಯೋಜಕರಾದ ವಿಜಯರಾಣಿ ಮಸ್ಕಿ, ಲಕ್ಷ್ಮೀ ರೆಡ್ಡಿ, ರವಿಕುಮಾರ್ ಮತ್ತು ಸಕಲ ಕನ್ನಡ ವಿಭಾಗದ ಶಿಕ್ಷಕರಾದ ಅನಿಲ್ ಕುಮಾರ್. ಸಂತೋಷ ಜೋಶಿ, ಮಹೇಶ್ ಸ್ವಾಮಿ, ವಲ್ಲಭ ಜೋಶಿ, ಕವಿತಾ ತಿರುಮಲ, ಸುನೀತಾ ಹೂಗಾರ್. ಮತ್ತು ಸಕಲ ವಾಸವದತ್ತ ವಿದ್ಯಾ ವಿಹಾರದ ಪ್ರೇರಣಾದಾಯಕ ಸಕಲ ಶಿಕ್ಷಕ ಬಳಗ ಉಪಸ್ಥಿತವಿತ್ತು. ವೈಭವಿ ಗೋಣಿ, ರೋಹಿತ್ ಸಿನ್ನೂರಕರ್ ಸೇರಿದಂತೆ ಅನೇಕರು ಇದ್ದರು.
7ನೇ ತರಗತಿಯ ಮಕ್ಕಳು ನಿರೂಪಿಸಿದರು. ಸಹನಾ ಪಾಟೀಲ್ ಸ್ವಾಗತಿಸಿದಳು. ಶ್ರಾವಂತಿ ಪುರಾಣಿಕ ಕನ್ನಡ ನಾಡು ನುಡಿ ಬಗ್ಗೆ ಮಾತನಾಡಿದಳು, ದಿವ್ಯಶ್ರೀ ವಂದಿಸಿದಳು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು, ನಾಡಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.