ಚಿತ್ತಾಪುರ ಶ್ರೀ ಬಸವೇಶ್ವರ ಶಾಲೆಯಲ್ಲಿ ಮಕ್ಕಳಿಂದ ಅಣುಕು ಮತದಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶನಿವಾರ ಅಣುಕು ಮತದಾನ ನಡೆಯಿತು.
ಮಕ್ಕಳಲ್ಲಿ ಚುನಾವಣೆ ಹಾಗೂ ಮತದಾನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಅಣುಕು ಮತದಾನ ನಡೆಸಲಾಯಿತು. ಮತದಾನದಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು ಎಂದು ಮುಖ್ಯಗುರು ದೇವೇಂದ್ರಪ್ಪ ಇಮಡಾಪುರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರಾದ ಶರಣಬಸಪ್ಪ ಬೊಮ್ಮನಹಳ್ಳಿ, ಮನೋಹರ ಬಾಬು ಹಡಪದ, ಶಂಕರ್ ರಾಥೋಡ್, ಶೈಲಜಾ ಹರಸೂರ, ಲಲಿತಮ್ಮ ರೇಷ್ಮಿ, ಕರಬಸಮ್ಮ, ಬಸ್ಸಮ್ಮ, ಸಾಜಿದಾ, ಕು.ಕಾಶಿಬಾಯಿ ಚುನಾವಣೆಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.