ರಾಜಶ್ರೀ ಸಿಮೆಂಟ್ ಕಂಪನಿ ವತಿಯಿಂದ ರೈತರಿಗೆ ತಾಡಪತ್ರಿ ವಿತರಣೆ
ನಾಗಾವಿ ಎಕ್ಸಪ್ರೆಸ್
ಸೇಡಂ: ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜಶ್ರೀ ಸಿಮೆಂಟ್ ಕಂಪೆನಿ ವತಿಯಿಂದ ತಾಡಪತ್ರಿ ವಿತರಣೆ ಮಾಡಲಾಗಿದೆ ಎಂದು ಕಂಪೆನಿಯ ಉಪಾಧ್ಯಕ್ಷ ನಾರಾಯಣ ಹೇಳಿದರು.
ತಾಲೂಕಿನ ಮಳಖೇಡ ಹತ್ತಿರದ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಅಲ್ಟ್ರಾ ಟೆಕ್ ಕಮ್ಯುನೀಟಿ ವೇಲ್ ಫೇರ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ರೈತರಿಗೆ ತಾಡಪತ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಕಂಪೆನಿ ಮಾಡಲಿದೆ ಎಂದು ಹೇಳಿದರು.
ರಾಜಶ್ರೀ ಸಿಮೆಂಟ್ ಕಂಪೆನಿ ವತಿಯಿಂದ 165 ಜನರಿಗೆ ತಾಡಪತ್ರಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಂಪೆನಿಯ ಚನ್ನವೀರಯ್ಯ, ಅಶ್ವಿನಿ ರಾಠೋಡ, ಶರಣಪ್ಪ ಮರಗೋಳ, ಕಾಶಿಬಾಯಿ ಸೇರಿದಂತೆ ಇತರರು ಇದ್ದರು.

