ಚಿತ್ತಾಪುರ: 20ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಕಾರ್ಯಕ್ರಮ, ಭಕ್ತಿಯಲ್ಲಿ ಮಿಂದೆದ್ದ ಅಯ್ಯಪ್ಪ ಮಾಲಧಾರಿಗಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಾಲಾಜಿ ಮಂದಿರದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ 20ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಕಾರ್ಯಕ್ರಮ ಶುಕ್ರವಾರ ಶ್ರದ್ಧೆ ಭಕ್ತಿಯಿಂದ, ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಭಕ್ತಿಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮಿಂದೆದ್ದರು. ಶ್ರೀಕಾಂತ್ ಲಂಭೋದರ ಗುರು ಸ್ವಾಮಿ ಹಾಗೂ ಅವರ ತಂಡದಿಂದ ನವಗೃಹ ಪೂಜೆ, ಗಣಪತಿ ಪೂಜೆ, ಲಕ್ಷ್ಮೀ ಪೂಜೆ, ಸುಬ್ರಹ್ಮಣ್ಯ ಪೂಜೆ, ಅಯ್ಯಪ್ಪ ಅಭಿಷೇಕ ಹಾಗೂ ಮಹಾ ಪಡಿ ಪೂಜೆ ನಡೆಯಿತು. ಕಾರ್ತಿಕ್ ನಾರಾಯಣಪೇಟ್ ಅವರ ತಂಡದಿಂದ ಅಯ್ಯಪ್ಪ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಅರ್ಚಕ ಸೂರ್ಯಕಾಂತ, ಆನಂದಕುಮಾರ್ ಗುರುಸ್ವಾಮಿ, ಚಂದ್ರಶೇಖರ ಗುರುಸ್ವಾಮಿ, ರಂಗಾಸ್ವಾಮಿ ಸೇಡಂ, ಸಿದ್ದು ಸೂನಾರ್ ಗುರುಸ್ವಾಮಿ, ಲಕ್ಷ್ಮೀಕಾಂತ ಗುರುಸ್ವಾಮಿ, ಉಮೇಶ್ ಗುರುಸ್ವಾಮಿ, ಸಂತೋಷ ಪೂಜಾರಿ, ಬಸವರಾಜ ಪಾಟೀಲ ಬೆಳಗುಂಪಾ, ಶರಣರೆಡ್ಡಿ ಇಜಾರ್, ಸೋಮು ಟೋಕಾಪೂರ, ಆನಂದ ಕಾಶಿ, ಸಿದ್ದು ಸ್ವಾಮಿ, ಆಕಾಶ ಸ್ವಾಮಿ, ಪೃಥ್ವಿ, ಶರಣು, ಬಸವರಾಜ, ಬಸರೆಡ್ಡಿ, ಅಶ್ವಥ್, ಹಣಮಂತ ಇಂಗಳಗಿ, ಮಹೇಶ್ ಕಾಶಿ, ಮಲ್ಲು ಇಂಗಳಗಿ, ಬನ್ನಪ್ಪ ಸೇಡಂ, ವಿಠಲ್ ಕಟ್ಟಿಮನಿ, ಭೀಮು ಸೇಡಂ, ಶ್ರೀಧರ್ ವಾರದ್, ಉಮೇಶ್ ಕಾಶಿ ಸೇರಿದಂತೆ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾ ದಾರಿಗಳು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.