ಫೆ.11 ರಂದು ಅಳ್ಳೋಳ್ಳಿ ಗ್ರಾಮದಲ್ಲಿ ಕೊತ್ಲಾಪೂರ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದ ಸಾವಿರ ದೇವರ ಸಂಸ್ಥಾನ ಮಠದ ಹತ್ತಿರ ಕೊತ್ಲಾಪೂರ ರೇಣುಕಾ ಯಲ್ಲಮ್ಮ ದೇವಿಯ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭವನ್ನು ಫೆ.11 ರಂದು ನಡೆಯಲಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಭಕ್ತಾದಿಗಳು ಭಾಗವಹಿಸಬೇಕು ಎಂದು ದೇವಸ್ಥಾನದ ನಿರ್ಮಾತೃ ಮಹೇಂದ್ರಗೌಡ ಅಳ್ಳೋಳ್ಳಿ ತಿಳಿಸಿದ್ದಾರೆ.
ಫೆ.8 ರಂದು ಮಧ್ಯಾಹ್ನ 3.30 ಕ್ಕೆ ಗಂಗಾಸ್ನಾನ ಮತ್ತು ಮೂರ್ತಿ ಮೆರವಣಿಗೆ ಫೆ.11 ರಂದು ಬೆಳಗ್ಗೆ 10.30 ಕ್ಕೆ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಸಾವಿರ ದೇವರ ಮಠದ ಶ್ರೀ ಸಂಗಮನಾಥ ಮಹಾಸ್ವಾಮಿಗಳು, ದಂಡಗುಂಡ ಶ್ರೀ ಸಂಗನಬಸವ ಶಿವಾಚಾರ್ಯರು, ಹಲಕಟ್ಟಿ ಶ್ರೀಗಳಾದ ಮುನೀಂದ್ರ ಶಿವಾಚಾರ್ಯರು, ರಾಜೇಶೇಖರ ಶಿವಾಚಾರ್ಯರು, ಅಳ್ಳೋಳ್ಳಿ ಗದ್ದುಗೆ ಮಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು, ವಿಶ್ವಕರ್ಮ ಏಕದಂಡಗಿ ಮಠದ ಕುಮಾರಸ್ವಾಮಿ ಮಹಾಸ್ವಾಮಿಗಳು, ಸೂಗೂರ ಶ್ರೀ ಹಿರಗಪ್ಪ ತಾತನವರು, ವಿಠಲ್ ಮಹಾರಾಜ, ಸಿದ್ದಲಿಂಗ ಸ್ವಾಮಿಗಳು, ಈರಮ್ಮ ಆಯಿ, ವೈರಾಗ್ಯ ಮೂರ್ತಿ ವಿಶ್ವಾರಾಧ್ಯ ಶರಣರು, ಪಾಂಡುರಂಗ ಮುತ್ಯಾ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಶಾಸಕರಾದ ಬಿ.ಜಿ.ಪಾಟೀಲ, ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರ, ಭಾಗಣ್ಣಗೌಡ ಸಂಕನೂರ, ಲಿಂಗಾರೆಡ್ಡಿ ಭಾಸರೆಡ್ಡಿ, ಸತೀಶ್ ಗುತ್ತೇದಾರ, ನಾಗರೆಡ್ಡಿ ಪಾಟೀಲ ಕರದಾಳ, ಭೀಮಣ್ಣ ಸಾಲಿ, ವಿನೋದ ಗುತ್ತೇದಾರ, ಶಂಕರಗೌಡ ರಾವೂರಕರ್, ನಾಗಯ್ಯ ಗುತ್ತೇದಾರ ಸೇರಿದಂತೆ ಅನೇಕ ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.