ತೊಗರಿ ಬೆಳೆಗೆ 450 ರೂ.ಪ್ರೋತ್ಸಾಹ ಧನ, ಸರ್ಕಾರದ ನಿರ್ಧಾರಕ್ಕೆ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಹರ್ಷ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ರಾಜ್ಯ ಸರ್ಕಾರ ತೊಗರಿ ಬೆಳೆಗೆ 450 ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿಯೇ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ ಕಲಬುರ್ಗಿಯಾಗಿದೆ. ರೈತರು ತೊಗರಿ ಬೆಳೆದಾಗ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿರುತ್ತದೆ. ಕೇಂದ್ರ ಸರ್ಕಾರ 7550 ರೂ. ಬೆಂಬಲ ಬೆಲೆ ನೀಡುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರವೂ ಇನ್ಸೆಂಟಿವ್ ಕೊಟ್ಟು ತೊಗರಿ ರೈತರ ನೆರವಿಗೆ ಬರಬೇಕು ಎಂದು ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದ್ದೆ. ಈಗ ರಾಜ್ಯ ಸರ್ಕಾರ ತೊಗರಿ ರೈತರ ನೆರವಿಗೆ ಬಂದು 450 ರೂ. ಪ್ರೋತ್ಸಾಹ ಧನ ನೀಡಲು ಒಪ್ಪಿಕೊಂಡು, ಆರ್ಥಿಕ ಇಲಾಖೆ ಒಪ್ಪಿಗೆಯೂ ನೀಡಿದ್ದಕ್ಕೆ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಜೊತೆಗೆ ಈ ಬಗ್ಗೆ ಶೀಘ್ರ ನಿರ್ಣಯ ಕೈಗೊಂಡ ಸಚಿವ ಶಿವಾನಂದ ಪಾಟೀಲ್, ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಗಳು ಸಲ್ಲಿಸಿದ್ದಾರೆ.