ಚಿತ್ತಾಪುರ ಪುರಸಭೆ ವಾಣಿಜ್ಯ ಮಳಿಗೆಯ ಅಂಗಡಿ ಅಂಗವಿಕಲನಿಗೆ ಹಸ್ತಾಂತರ ಮಾಡಲು ಮಹ್ಮದ್ ಇಬ್ರಾಹಿಂ ಜಿಲ್ಲಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕೆನರಾ ಬ್ಯಾಂಕ ಹತ್ತಿರ ಇರುವ ಪುರಸಭೆ ವಾಣಿಜ್ಯ ಮಳಿಗೆಯ ಅಂಗಡಿ ಸಂಖ್ಯೆ 10 ನ್ನು ಅಂಗವಿಕಲರಿಗಾಗಿ ಮೀಸಲಿಟ್ಟಿದ್ದು. ಹರಾಜಿನಲ್ಲಿ ಅಂಗವಿಕಲ ಅಬ್ದುಲ್ ಖಾದರ ಹಜರತ್ ಸಾಬ್ ಇತನಿಗೆ ಮಂಜೂರಿಯಾಗಿದೆ, ಆದರೆ ಇಲ್ಲಿವರೆಗೆ ಸದರಿ ಅಂಗಡಿ ಹಸ್ತಾಂತರ ಮಾಡಿಲ್ಲ ಕೀಲಿ ಕೈ ನೀಡಿಲ್ಲ ಹೀಗಾಗಿ ಪುರಸಭೆ ಮುಖ್ಯಾಧಿಕಾರಿಗೆ ಕೂಡಲೇ ಅಂಗಡಿ ಹಸ್ತಾಂತರ ಮಾಡಲು ಸೂಚಿಸಬೇಕು ಎಂದು ತಾಲೂಕಾ ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸದರಿ ಅಂಗಡಿ ಹರಾಜು ಆದ I ವಾರದೊಳಗೆ ಡಿಪಾಸಿಟ್ ಹಣ ತೆಗೆದುಕೊಂಡು ಅಂಗಡಿ ಹಸ್ತಾಂತರ ಮಾಡುತ್ತೇವೆಂದು ಮುಖ್ಯಾಧಿಕಾರಿ ಹೇಳಿ ಸುಮಾರು 4 ತಿಂಗಳು ಕಳೆದರೂ ಸಹಿತ ಇನ್ನೂವರೆಗೆ ಅಂಗಡಿ ಹಸ್ತಾಂತರ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಸದರಿ ಮಳಿಗೆಯಲ್ಲಿ ಅಂಗಡಿ ನಂಬರ 10ಕ್ಕೆ ಆನಲೈನ್ ಮೂಲಕ ಫೆ.1 ರಂದು ಅರ್ಜಿ ಸಲ್ಲಿಸಿರುತ್ತಾನೆ. ಸದರಿ ಅಂಗಡಿಯ ಹರಾಜು ಪ್ರಕ್ರಿಯೆ ಫೆ.15ರಂದು ನಡೆದು ಆ ಹರಾಜಿನಲ್ಲಿ ಅಂಗಡಿ ನಂಬರ 10 ಮಂಜೂರಿಯಾಗಿರುತ್ತದೆ. ಆದರೆ ಸದರಿ ಅಂಗಡಿಯನ್ನು 2 ವಾರಗಳ ಒಳಗಾಗಿ ತಮ್ಮನ್ನು ಕರೆಯಿಸಿ ಅಗ್ರಿಮೆಂಟ್ ಮಾಡಿಕೊಂಡು ಅಂಗಡಿಯ ಕೀಲಿ ಕೈ ಕೊಡುತ್ತೇವೆಂದು ಹೇಳಿರುತ್ತಾರೆ. ಆದರೆ ಈಗ ಸುಮಾರು 4 ತಿಂಗಳು ಆದರೂ ಕೂಡ ಇನ್ನೂವರೆಗೆ ಸದರಿ ಅಂಗಡಿಯನ್ನು ಹಸ್ತಾಂತರ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ಆದಕಾರಣ ತಾವುಗಳು ಕೂಡಲೇ ಸದರಿ ಅಂಗಡಿ ಅಗ್ರಿಮೆಂಟ್ ಮಾಡಿ ನಮ್ಮ ಕಡೆಯಿಂದ ಡಿಪಾಸಿಟ್ ಹಣವನ್ನು ಪಡೆದುಕೊಂಡು ಕೂಡಲೇ ಅಂಗಡಿಯನ್ನು ಹಸ್ತಾಂತರ ಮಾಡಲು ಮುಖ್ಯಾಧಿಕಾರಿಗಳು ಪುರಸಭೆ ಚಿತ್ತಾಪುರ ಇವರಿಗೆ ಆದೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

