ರಟಕಲ್ ರೇವಣಸಿದ್ದೇಶ್ವರ ರೊಟ್ಟಿ ಕೇಂದ್ರ ಉದ್ಘಾಟನೆ, ರೊಟ್ಟಿ ತಿಂದವರು ಗಟ್ಟಿ; ಗುತ್ತೇದಾರ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಆರೋಗ್ಯದ ವಿಚಾರಕ್ಕೆ ಬಂದಾಗ ಆಹಾರದ ಆಯ್ಕೆ ಬಹಳ ಮುಖ್ಯವಾಗುತ್ತದೆ, ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ರೊಟ್ಟಿ ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು, ರೊಟ್ಟಿ ತಿಂದವರು ಬಲುಗಟ್ಟಿ, ಇದು ಸಿರಿಧಾನ್ಯದ ಶಕ್ತಿಯಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ ಹೇಳಿದರು.
ತಾಲೂಕಿನ ಕಂದಗೋಳ ಕ್ರಾಸ್ ನಲ್ಲಿ ರಟಕಲ್ ರೇವಣಸಿದ್ದೇಶ್ವರ ರೊಟ್ಟಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಕುಲಬುರ್ಗಿಯ ರೊಟ್ಟಿಗೆ ಬಹಳ ಬೇಡಿಕೆ ಇದೆ ಎಂದು ಹೇಳಿದರು. ಇತ್ತೀಚೆಗೆ ಈ ಭಾಗದ ಜೋಳದ ರೊಟ್ಟಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ ಆನ್ ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು. ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸಲು ರೊಟ್ಟಿ ಮಾಡುವ ಕಾಯಕ ಮಹತ್ವ ಪಡೆದುಕೊಂಡಿದೆ ಎಂದರು.
ಸೂಗೂರು (ಕೆ) ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ರಟಕಲ್‌ನ ನಡುವಿನ ಮಠದ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿದರು. ಯುವ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿದರು.
ಕಾಳಗಿ ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ, ಮುಖಂಡರಾದ ಬಸವರಾಜ ತೋಟದ್, ರೇವಣಸಿದ್ದಪ್ಪ ಸಾತನೂರ, ಶಿವರಾಜ ಪಾಟೀಲ್ ಗೊಣಗಿ, ಚನ್ನಬಸಪ್ಪ ದೇವರಮನಿ, ವಿಜಯಕುಮಾರ ಹಳಕಟ್ಟೆ, ಶಾಂತವೀರ ದಸ್ತಾಪೂರ, ಶಿವಶರಣಪ್ಪ ಚನ್ನೂರ, ಬಸವರಾಜ ಪಾಟೀಲ್ ಬೆಡಸೂರ, ಸಿದ್ದರೂಡ ಬಮ್ಮಾಣಿ, ಗೌರಿಶಂಕರ ಬಳವಡಗಿ, ಶಿವಲಿಂಗಪ್ಪ ಬಳವಡಗಿ, ಮಲ್ಲಿಕಾರ್ಜುನ ಬಳವಡಗಿ, ನಾಗರಾಜ ಸಿಂಪಿ, ಮನೋಹರ ಯಾಳಗಿ, ಬಸವರಾಜ ಜೋಕಾ, ಶರಣಬಸಪ್ಪ ಮಾಲಿಪಾಟೀಲ್, ಮಾಣಿಕರಾವ ಬಳವಡಗಿ, ವೀರಣ್ಣ ಗುಡದಾ, ರಮೇಶ ಐರೋಡಗಿ, ಶ್ರೀಶೈಲ ವಾಂಗಿ, ವಿಶ್ವನಾಥ ವಾಂಗಿ, ವೈಜನಾಥ ಯಲ್ಲಟ್ಟಿ, ಸೇರಿದಂತೆ ಇತರರು ಇದ್ದರು.