ವಾಡಿ ಬಿಜೆಪಿ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿಯನ್ನು ಯುವ ಮುಖಂಡ ವಿಠಲ ನಾಯಕ, ಮರಾಠ ಸಮಾಜದ ಅಧ್ಯಕ್ಷ ಅಶೋಕ ಪವಾರ ಅವರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಭಾರತದ ಇತಿಹಾಸದಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಿ ಆಳಿದ ವೀರಾಧಿವೀರ ರಾಜರುಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖರಾಗಿದ್ದರು ಎಂದರು.
ಆಗ ದೇಶದಲ್ಲಿ ಮೊಗಲ್ ಸಾಮ್ರಾಜ್ಯ ತುಂಬಾ ಪ್ರಬಲವಾಗಿತ್ತು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರದಲ್ಲಿ ಪ್ರಬಲವಾಗಿದ್ದ ಸುಲ್ತಾರು, ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಾ ಸಾಗುತ್ತಿದ್ದ ಬ್ರಿಟಿಷರು ಸೇರಿದಂತೆ ಎಲ್ಲರೊಂದಿಗೆ ಹೋರಾಡಿ ಛತ್ರಪತಿ ಶಿವಾಜಿ ಮಹಾರಾಜರು ಮರಾಠ ಸಾಮ್ರಾಜ್ಯ ಸ್ಥಾಪಿಸಿದರು.
ತಾಯಿ ಜೀಜಾಬಾಯಿ, ತಂದೆ ಮೊಘಲ್ ದೊರೆಯ ಸೇನೆಯಲ್ಲಿ ಇದ್ದರು. ಆದರೆ ಜೀಜಾಬಾಯಿಗೆ ಹಿಂದೂಧರ್ಮವನ್ನು ಮತ್ತೆ ಸ್ಥಾಪಿಸಬೇಕೆಂಬುವುದು ದೊಡ್ಡ ಕನಸ್ಸಾಗಿತ್ತು. ಮಗನಿಗೆ ಪ್ರೇರಣೆ ನೀಡುವ ಕತೆಗಳನ್ನು ಹೇಳುತ್ತಾ ಅವರಲ್ಲಿ ಧೈರ್ಯ ಹಾಗೂ ಹಿಂದೂ ಸಾಮ್ರಾಜ್ಯ ಕಟ್ಟಬೇಕೆಂಬ ಛಲ ತುಂಬಿದರು. ಇದರಿಂದಾಗಿ ಛತ್ರಪತಿ ಶಿವಾಜಿಗೆ ಎಲ್ಲರನ್ನು ಎದುರಿಸಿ ಮರಾಠ ಸಾಮ್ರಾಜ್ಯ ಕಟ್ಟಿ ಹಿಂದೂ ಧರ್ಮದ ಶ್ರೇಷ್ಠತೆ ಸಾರಿ ಸ್ವಾಭಿಮಾನ ಮೆರೆದು ನಮ್ಮೆಲ್ಲರ ಮನದಲ್ಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೊಗೇಂದ್ರ ವಾಲಿಯ, ಹರಿ ಗಲಾಂಡೆ, ಭಾಳು ಪವಾರ, ಶರಣಗೌಡ ಚಾಮನೂರ, ಭೀಮರಾವ ದೊರೆ, ಗಣಪತರಾವ ಸುತ್ರಾವೆ, ಸಂಜಯ ಗಾಯಕವಾಡ, ಬಸವರಾಜ ಕಿರಣಗಿ, ಹಣಮಂತ ಚವ್ಹಾಣ, ರವೀಂದ್ರ ನಾಯಕ, ಮಲ್ಲಿಕಾರ್ಜುನ ಸಾತಖೇಡ, ದತ್ತಾ ಖೈರೆ, ಮನಿಷ್ ವಾಲಿಯ, ಚಂದ್ರಶೇಖರ ಬೆಣ್ಣೂರ, ಕುಮಾರ ಜಾಧವ, ಜಯಂತ ಪವಾರ, ಅಂಬ್ರೇಷ ಕಾಳೆ, ಆಕಾಶ ಸೇರಿದಂತೆ ಇತರರು ಇದ್ದರು.