Oplus_0

ಉಪ್ಪಾರ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ವಸಂತಕುಮಾರ್ ಚೂರಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಉಪ್ಪಾರ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಈ ಕುರಿತು ಮಾರ್ಚ್ ತಿಂಗಳಲ್ಲಿ ಮಂಡನೆಯಾಗುವ ಬಜೆಟ್ ನಲ್ಲಿ ಪ್ರಸ್ತಾಪಿಸಬೇಕು ಎಂದು ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ವಸಂತಕುಮಾರ ಚೂರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಉಪ್ಪಾರ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಹಾಗೂ ಉಪ್ಪಾರ ನಿಗಮಕ್ಕೆ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಿ ಹೆಚ್ಚು ಹಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ಜಿಲ್ಲಾ ಕೇಂದ್ರದಲ್ಲಿ ಉಪ್ಪಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಜಾಗ ಮತ್ತು ಹಣ ಮಂಜೂರು ಮಾಡಬೇಕು, ಭಗೀರಥ ಪೀಠದ ಎದುರು ಬೃಹತ್ ಭಗೀರಥ ಮೂರ್ತಿ ಸ್ಥಾಪನೆಗೆ ಹಣ ನೀಡಬೇಕು, ಬೆಂಗಳೂರು ಉಪ್ಪಾರ ಧಾರ್ಮಿಕ ಟ್ರಸ್ಟಿನ ಕಟ್ಟಡಕ್ಕೆ ಹಣ ನೀಡಬೇಕು, ಬೆಂಗಳೂರು ನಗರದ ಪ್ರಮುಖ ಸ್ಥಳವಾದ ಉಪ್ಪಾರ ಪೇಟೆ ಅಥವಾ ಕೆಂಪೇಗೌಡ ರಸ್ತೆಯ ವೃತ್ತದಲ್ಲಿ ಭಗೀರಥ ಮೂರ್ತಿ ಸ್ಥಾಪನೆ ಮಾಡಿ ಭಗೀರಥ ವೃತ್ತ ಎಂದು ಹೆಸರಿಡಬೇಕು, ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ದಾಖಲಾತಿ ಸೂಕ್ತ ಆದಾಯ, ಜಾತಿಯ ಪ್ರಮಾಣ ಪತ್ರ ನೀಡಿದರೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಿ ದಾಖಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!