Oplus_0

ಚಿತ್ತಾಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧಿಕಾರಾವಧಿ ಮುಕ್ತಾಯ, ಆಡಳಿತಾಧಿಕಾರಿ ನೇಮಕ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ಅಧಿಕಾರಾವಧಿ ಫೆ.13 ರಂದು ಮುಕ್ತಾಯಗೊಂಡಿರುತ್ತದೆ ಆದರೆ ಹೊಸದಾಗಿ ಆಡಳಿತ ಮಂಡಳಿ ರಚನೆ ಆಗಿರುವುದಿಲ್ಲ. ಆದಕಾರಣ ಆಡಳಿತಾತ್ಮಕ ರಿಕ್ತತೆ ಉಂಟಾಗಬಾರದೆಂಬ ಸದುದ್ದೇಶದಿಂದ ಮತ್ತು ಬ್ಯಾಂಕಿನ ಹಾಗೂ ಸದಸ್ಯರ ಹಿತದೃಷ್ಟಿಯಿಂದ ದೈನಂದಿನ ಕಾರ್ಯ ಚಟುವಟಿಕೆ ನಡೆಸಿಕೊಂಡು ಹೋಗಲು ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರಡಿ ಮುಂದಿನ ಅಗತ್ಯ ಕ್ರಮವಿಡಲು ಕಲಂ 28ಎ(5) ರನ್ವಯ ನಿಗದಿಪಡಿಸಿದಂತೆ ಸದರಿ ಬ್ಯಾಂಕಿಗೆ ಆಢಳಿತಾಧಿಕಾರಿ ನೇಮಕ ಮಾಡುವುದು ಸೂಕ್ತವೆಂದು ಮನಗಂಡು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 28ಎ(5) 200(1) ರನ್ವಯ ಹಾಗೂ ಉಲ್ಲೇಖಿತ ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಓ:ಸಿಎಲ್ಎಂ:2016, 6 ಡಿಸೆಂಬರ್ 2016 ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ  ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ ಚಿತ್ತಾಪುರ ಇದಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸೇಡಂ ಉಪವಿಭಾಗ ಸೇಡಂ ಇವರನ್ನು 45 ದಿನಗಳ ಅವಧಿಗಾಗಿ ಆಡಳಿತಾಧಿಕಾರಿಯೆಂದು ನೇಮಕ ಮಾಡಿ ಆದೇಶಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!