ಚಿತ್ತಾಪುರ ಪುರಸಭೆ ಅಧ್ಯಕ್ಷ ಸ್ಥಾನ ಬಂಜಾರ ಸಮಾಜಕ್ಕೆ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆಯ ಇತಿಹಾಸದಲ್ಲಿ ಇಲ್ಲಿವರೆಗೆ ಬಂಜಾರ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ ಹೀಗಾಗಿ ಈ ಬಾರಿ ಬಂಜಾರ ಸಮಾಜದ ಪುರಸಭೆ ಸದಸ್ಯೆ ಬೇಬಿಬಾಯಿ ಸುಭಾಷ್ ಜಾದವ್ ಅವರಿಗೆ ಪುರಸಭೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಸಮಾಜದ ಮುಖಂಡರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರ್ಗಿಯಲ್ಲಿ ಸೋಮವಾರ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಚಿತ್ತಾಪುರ ಪುರಸಭೆ ಇತಿಹಾಸದಲ್ಲಿ ಇನ್ನೂವರೆಗೆ ಬಂಜಾರ ಸಮುದಾಯದವರು ಪುರಸಭೆ ಅಧ್ಯಕ್ಷರಾಗಿಲ್ಲ ಆದಕಾರಣ ಈ ಬಾರಿ ನಮ್ಮ ಸಮಾಜಕ್ಕೆ ಒಂದು ಅವಕಾಶ ಮಾಡಿಕೊಡಿ ಎಂದು ಬಂಜಾರ ಸಮಾಜದ ಕಾಂಗ್ರೆಸ್ ಪಕ್ಷದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರವಿಂದ ಚವ್ಹಾಣ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ, ಹರಿನಾಥ್ ಚವ್ಹಾಣ ಮಾಜಿ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಹರಿನಾಥ್ ಚವ್ಹಾಣ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಹರಿಶ್ಚಂದ್ರ ರಾಥೋಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚಂದು ಜಾಧವ, ಬೋರು ರಾಥೋಡ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಗೋಪಿ ರಾಥೋಡ, ರವಿ ರಾಠೋಡ ಮೊಗಲಾ, ವಿಜಯ ಕುಮಾರ್ ಯಾಗಾಪುರ, ದೇವಿದಾಸ ಚವ್ಹಾಣ, ಪ್ರವೀಣ್ ಪವಾರ, ರಾಕೇಶ್ ಪವಾರ, ಕುಮಾರ್ ಚವ್ಹಾಣ ಯಾಗಾಪುರ, ರವಿ ಜಾಧವ, ವಿಠ್ಠಲ್ ರಾಠೋಡ, ಭೀಮನಹಳ್ಳಿ, ಕಿಶನ್ ರಾಠೋಡ, ಶಂಕರ್ ಚೊಕಲ್ಲಾ ಚವ್ಹಾಣ, ಮಹದೇವ್ ರಾಠೋಡ, ಸುಭಾಷ್ ಜಾಧವ, ವಿಜಯಕುಮಾರ್ ಚವ್ಹಾಣ, ಸಂತೋಷ ರಾಠೋಡ ಸೇರಿದಂತೆ ಇತರರು ಇದ್ದರು.