ಹದನೂರ ಗ್ರಾಮದ ಗೈಯರಾಣ ಸರ್ಕಾರಿ ಜಮೀನು ಸರ್ವೆ ಮಾಡಿಸಿ ಕಡು ಬಡವರಿಗೆ ನಿವೇಶನ ಹಂಚಿಕೆ ಮಾಡಲು ಮನವಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ಕಾಳಗಿ ಹೋಬಳಿಯ ಹದನೂರ ಗ್ರಾಮದ ಜಮೀನು ಸರ್ವೆ ನಂ. 110/- ವಿಸ್ತೀರ್ಣ 06 ಎಕರೆ 33 ಗುಂಟೆ ಜಮೀನಿನ ಸರ್ವೆ ಮಾಡಿಸಿ ಕಡು-ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಾನಂದ್ ಪೂಜಾರಿ, ಮಾಜಿ ಸದಸ್ಯ ಹಣಮಂತರಾಯ ಯಳಮೇಲಿ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹದನೂರ ಗ್ರಾಮದ ಜಮೀನು ಸರ್ವೆ ನಂ. 110/- ವಿಸ್ತೀರ್ಣ 06 ಎಕರೆ 33 ಗುಂಟೆ ಜಮೀನಿಲ್ಲಿ 01 ಎಕರೆ ಜಮೀನು ಸಾರ್ವಜನಿಕ ಸ್ಮಶಾನಕ್ಕಾಗಿ ಮಂಜೂರಾಗಿರುತ್ತದೆ. ಇನ್ನೂ ವಿಸ್ತೀರ್ಣ 05 ಎಕರೆ 33 ಗುಂಟೆ ಜಮೀನು ಗೈಯರಾಣ ಸರ್ಕಾರಿ ಜಮೀನು ಇರುತ್ತದೆ. ಈ ಗೈಯರಾಣ ಸರ್ಕಾರಿ ಜಮೀನಿನಲ್ಲಿ ಕೆಲವೊಬ್ಬರು ಪ್ಲಾಟುಗಳನ್ನು ತೋರಿಸಿ ಬೇರೆಯವರಿಂದ ಹಣ ಪಡೆದು ಮಾರಾಟ ಮಾಡಿರುತ್ತಾರೆ. ಕೆಲವೊಬ್ಬರು ಪ್ಲಾಟುಗಳನ್ನು ಹಾಕಿ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಸರ್ವೆ ಮಾಡಿಸಿ ಕಡುಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆದ್ದರಿಂದ ಕೂಡಲೇ ಗ್ರಾಮದ ಸರ್ವೆ ನಂ.110 ಸರ್ವೆ ಮಾಡಿಸಿ ಕಡು-ಬಡವರಿಗೆ ನಿವೇಶನ ಇಲ್ಲದವರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಸಮಸ್ತ ಹದನೂರ ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.