ವಾಡಿ ಜಗಜೀವನರಾಮ್ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ಶರಣು ಮರತೂರ ಆಯ್ಕೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ಮಾದಿಗ ಸಮಾಜದ ವತಿಯಿಂದ ಆಚರಿಸಲಾಗುತ್ತಿರುವ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 118ನೇ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾಗಿ ಶರಣು ಮರತೂರ ಆಯ್ಕೆಯಾಗಿದ್ದಾರೆ.
ಪಟ್ಟಣದ ಜಾಂಭವೀರ ಕಾಲೋನಿಯ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಸಮಾಜದ ಸಭೆಯಲ್ಲಿ ಹಿರಿಯರು ಈ ನಿರ್ಣಯ ಕೈಗೊಂಡಿದ್ದಾರೆ. ಇದೇ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ರಾಜು ರಾಂಪುರಹಳ್ಳಿ, ಶಶಿ ಆರೋಲಿಕರ, ಸಿದ್ಧಾರ್ಥ ಜಂಗಮ, ಶಿವಕುಮಾರ ತುಮಕೂರಕರ (ಉಪಾಧ್ಯಕ್ಷರು), ಜಗದೀಶ ಮುಕ್ಕನಾಳ ( ಪ್ರಧಾನ ಕಾರ್ಯದರ್ಶಿ), ಅನೀಲ ಮುದ್ನಾಳ (ಖಜಾಂಚಿ), ವಿಜಯಕುಮಾರ ಯಲಗಟ್ಟಿ, ರೋಹಿತ ಕಾಂಬಳೆ, ಚಂದು ಕಾಂಬಳೆ, ಈಶ್ವರ ಹೊಸಮನಿ (ಸಹ ಕಾರ್ಯದರ್ಶಿಗಳು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾದಿಗ ಸಮಾಜದ ಅಧ್ಯಕ್ಷ ರಾಜು ಮುಕ್ಕಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.