Oplus_0

ಬಿರಾಳದಲ್ಲಿ ನಾಲವಾರ ಶ್ರೀಗಳ ಭವ್ಯ ಮೆರವಣಿಗೆ, ಜನಸಾಗರದ ಮಧ್ಯೆ ಶ್ರೀ ಕೋರಿ ಸಿದ್ದೇಶ್ವರರ ರಥೋತ್ಸವ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಸುಕ್ಷೇತ್ರ ಚಿಕ್ಕ ಬಿರಾಳ ಆರಾಧ್ಯ ದೈವ ವಾದ ಮಹಾತ್ಮ ಸದ್ಗುರು ಪವಾಡ ಪುರುಷ ಶ್ರೀ ಕೋರಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವ ನಾಲವಾರ ಶ್ರೀ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಬುಧುವಾರ ಸಹಸ್ರ ಸಹಸ್ರ ಭಕ್ತರ ಭಕ್ತಿ ಭಾವಗಳ ಮಧ್ಯೆ ಸಡಗರ ಸಂಭ್ರಮದಿಂದ ನೆರವೇರಿತು.

ಚಿಕ್ಕ ಬಿರಾಳ ಶ್ರೀ ಕೋರಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ ಶ್ರೀ ಕ್ಷೇತ್ರ ನಾಲವಾರ ಪೂಜ್ಯಶ್ರೀಗಳವರಿಗೆ ಸರಾಠದಲ್ಲಿ ಭವ್ಯ ಮೆರವಣಿಗೆಯ ಮೂಲಕ ಕಳಸ ಕನ್ನಡಿಗಳೊಂದಿಗೆ ಪೂರ್ಣ ಕುಂಭದೊಂದಿಗೆ ಡೊಳ್ಳು. ಹಲಗೆ ಬಾಜಿ ಭಜಂತ್ರಿಗಳು ಹಾಗೂ ವಾದ್ಯಗಳ ಮಧ್ಯೆ ಸಿಡಿಮದ್ದುಗಳ ಸಿಡಿಸುವುದರ ಮೂಲಕ ಪುಷ್ಪಾರ್ಚನೆಯ ಮಾಡುವುದರೊಂದಿಗೆ ಭವ್ಯವಾಗಿ ಭಕ್ತರು ಜಯ ಘೋಷಗಳ ಮಧ್ಯೆ ಸ್ವಾಗತಿಸಿದ್ದರು.

ಮೆರವಣಿಗೆ ಉದ್ದಗಲಕ್ಕೂ ಜನಸಾಗರವೇ ಸೇರಿತ್ತು ತದನಂತರ ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳವರ ಕರ್ತೃಗದ್ದುಗೆ ಶ್ರೀಗಳು ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ, ಭವ್ಯ ರಥೋತ್ಸವಕ್ಕೆ ಭಕ್ತರೊಂದಿಗೆ ಚಾಲನೆ ನೀಡಲು ಆಗಮಿಸುತ್ತಿದ್ದಂತೆ ನೆರೆದ ಅಪಾರ ಸಂಖ್ಯೆಯ ಭಕ್ತ ಸಮೂಹ ಜಯಗೋಷ ಮುಗಿಲು ಮುಟ್ಟುವಂತಿತ್ತು ಈ ಮಧ್ಯೆ ಸಿಡಿಮದ್ದುಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು ಶ್ರೀ ಕೋರಿ ಸಿದ್ದೇಶ್ವರ ಮಹಾರಾಜಕೀ ಜೈ, ಶ್ರೀ ಸಿದ್ದ ತೋಟೆಂದ್ರ ಮಹಾರಾಜ ಕೀ ಜೈ , ಶ್ರೀ ಮಲ್ಲಾರಾಧ್ಯ ಮಹಾರಾಜಕೀ ಜೈ ಎಂಬ ಜಯ ಘೋಷಗಳು ಮೊಳುಗುತ್ತಿದ್ದಂತೆ ಭವ್ಯ ರಥೋತ್ಸವ ಸಾಗಿತು.

ನಂತರ ಶ್ರೀ ಕೋರಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆ ಸನ್ನಿಧಾನವಹಿಸಿದ ನಾಲವಾರ ಶ್ರೀ ಗಳವರು ಆಶೀರ್ವಚನ ನೀಡುತ್ತಾ, ಮಹಾತ್ಮ ಶ್ರೀ ಕೋರಿಸಿದ್ದೇಶ್ವರರು ಈ ನಾಡಿನ ಪುಣ್ಯದ ನಿಧಿಯಂತೆ ಈ ಲೋಕಕ್ಕೆ ಬಂದು ಭಕ್ತರ ಕಷ್ಟ ನಷ್ಟಗಳನ್ನು ನಿವಾರಿಸಿ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿ ಈ ನಾಡಿನ ಕಾಮಧೇನು ಕಲ್ಪವೃಕ್ಷವಾಗಿ ಶ್ರೀ ಕ್ಷೇತ್ರ ನಾಲವಾರ ನೆಲೆಸುವ ಪೂರ್ವದಲ್ಲಿ ಜೀವನದ ಉದ್ದಕ್ಕೂ ವಿವಿಧ ಭಾಗಗಳಲ್ಲಿ ಸಂಚರಿಸಿ ಭಕ್ತರ ಕಷ್ಟಗಳನ್ನು ಕಳೆಯುತ್ತಿದ್ದರು ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಜೇವರ್ಗಿಯ ಮಾಜಿ ಶಾಸಕ  ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ನೀಲಕಂಠಾಯ್ ಗೌಡ ಇಟಗಿ, ಗುರುಬಸಪ್ಪ ಪೊಲೀಸ್ ಪಾಟೀಲ್, ಸಂತೋಷ್ ಮಾಲಿಪಾಟೀಲ್, ರಾಜಶೇಖರ ವಾರದ ಬಿರಾಳ, ಚಂದಣ್ಣ ಇನಾಮದಾರ್, ಯಶವಂತರಾಯಗೌಡ, ಮಹಮ್ಮದ್ ಅಲಿ, ಶಿವರೆಡ್ಡಿ ಗೌಡ ಕುಲಕುಂದಿ, ಮಹದೇವ ಗಂವಾರ, ಗದಗ್ ಜಿಲ್ಲೆ ಕೊತ್ಬಾಳ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿತು. ಬೆಳಗಿನಜಾವದವರೆಗೂ ಭಜನೆ ಪ್ರಸಾದ ವಿತರಣೆ ದರ್ಶನ ಆಶೀರ್ವಾದಗಳು ನೆರವೇರಿದವು.

Spread the love

Leave a Reply

Your email address will not be published. Required fields are marked *

You missed

error: Content is protected !!