ಶಾಲಾ ವಾರ್ಷಿಕೋತ್ಸವ, ಬೀಳ್ಕೊಡುವ ಸಮಾರಂಭ, ಚಿತ್ತಾಪುರ ಬಸವ ನಗರದ ಸರ್ಕಾರಿ ಶಾಲೆ ಖಾಸಗಿ ಶಾಲೆಗೆ ಮೀರಿಸುವಂತಿದೆ: ಕಾಳಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಖಲಾತಿ ಹಾಗೂ ಹಾಜರಾತಿಗೆ ಹೆಸರಾಗಿದ್ದು, ಇಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಪೂರಕ ವಾತಾವರಣ ಹಾಗೂ ವಿವಿಧ ರೀತಿಯ ಚಟುವಟಿಕೆಗಳು ಹಾಗೂ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಿವೆ ಹೀಗಾಗಿ ಈ ಸರ್ಕಾರಿ ಶಾಲೆ ಖಾಸಗಿ ಶಾಲೆಯನ್ನು ಮೀರಿಸುವಂತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಮತ್ತು 5 ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಾಲಕ ಪೋಷಕರ ಪಾತ್ರ ಪ್ರಮುಖವಾಗಿದೆ. ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಹೀಗಾಗಿ ಪಾಲಕರು ಮಕ್ಕಳಿಗೆ ದಿನಾಲು ಶಾಲೆಗೆ ಕಳುಹಿಸಿ ಸರಕಾರ ನೀಡುತ್ತಿರುವ ಸೌಲಭ್ಯವನ್ನು ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು. ಈಗಿರುವ ಶಾಲೆಯ ಪ್ರಭಾರಿ ಮುಖ್ಯ ಗುರುಗಳು, ಸಿಬ್ಬಂದಿ ವರ್ಗದವರು ಚನ್ನಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ನಮ್ಮ ವಾರ್ಡಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರಂತರವಾಗಿ ಒಂದಿಲ್ಲ ಒಂದು ಕಾರ್ಯಕ್ರಮಗಳು ವಿಶಿಷ್ಟ ರೀತಿಯಲ್ಲಿ ಮಾಡಿಕೊಂಡು ಬರುತ್ತಿರವುದು ನೋಡಿ ನಮಗೆ ಬಹಳ ಸಂತೋಷವಾಗಿದೆ. ಇದಕ್ಕೆ ಬುನಾದಿ ಹಾಕಿದ ಈ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಸೇವಾ ವಯೋನಿವೃತ್ತಿ ಹೊಂದಿದ ಕು.ಸರಸ್ವತಿ ಪಾಟೀಲ್ ಮತ್ತು ದೇವಪ್ಪ ನಂದೂರಕರ್ ಮತ್ತು ನಮ್ಮ ಈ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಮೊಗಲಾ ಶಾಲೆಯ ಮುಖ್ಯ ಗುರುಗಳಾಗಿದ್ದ ಸುರೇಶ ಸರಾಫ್ ಅವರಿಗೂ ಈ ವೇದಿಕೆ ಮುಖಾಂತರ ಅಭಿನಂದನೆಗಳು ಸಲ್ಲಿಸಬೇಕಾಗುತ್ತದೆ. ಕಾರಣ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಬಹಳ ಅರ್ಥ ಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಿದನ್ನು ನೋಡಿ ತುಂಬಾ ಸಂತೋಷವೆನಿಸುತ್ತಿದೆ ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ ಅಚ್ಚಿಕೇರಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮುಖ್ಯ ಗುರುಗಳಾದ ದೇವಿಂದ್ರಪ್ಪ ಶಹಾಬಾದಕರ್, ಜಗನಾಥ ಬಡಿಗೇರ, ಸುರೇಶ ಸರಾಫ್, ನಿವೃತ್ತಿ ಮುಖ್ಯಶಿಕ್ಷಕಿ ಕು.ಸರಸ್ವತಿ ಪಾಟೀಲ್, ಶಿಕ್ಷಕರಾದ ವಿಜಯಕುಮಾರ ಬಂಕಲಗಿ, ಹಾಜಿಸಾಬ ಮುಲ್ಲಾ ವಿಷ್ಣುವರ್ಧನ್ ರೆಡ್ಡಿ, ಅನಿಲ್, ವಿರೇಶ ಮಾಕಪ್ಪ, ಅಂಗನವಾಡಿ ಶಿಕ್ಷಕಿಯರಾದ ವಿಜಯಲಕ್ಷ್ಮಿ ಅರ್ಚಕ್, ರೇಣುಕಾ ಮೋರೆ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಇದ್ದರು.
ನಿವೃತ್ತ ಶಿಕ್ಷಕ ದೇವಪ್ಪ ನಂದೂರಕರ್ ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು, ಶಿಕ್ಷಕಿ ಶ್ರೀದೇವಿ ಕೋಬಾಳಕರ್ ಸ್ವಾಗತ ಕೋರಿದರು, ಶಾಲೆಯ ಮುಖ್ಯಗುರು ವೀರಸಂಗಪ್ಪ ಸುಲೇಗಾಂವ ನಿರೂಪಿಸಿದರು, ಶಿಕ್ಷಕಿ ಲಲಿತಾದೇವಿ ಸಜ್ಜನಶೆಟ್ಟಿ ವಂದನಾರ್ಪಣೆ ಮಾಡಿದರು. ನಂತರ ಮಕ್ಕಳಿಂದ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.