ಸಮಾಜದ ಸುಧಾರಣೆಯಲ್ಲಿ ಪೊಲೀಸರ ಹಾಗೂ ಪತ್ರಕರ್ತರ ಪಾತ್ರ ಕುರಿತು ಉಪನ್ಯಾಸ | ಪೊಲೀಸರ, ಪತ್ರಕರ್ತರ ಕರ್ತವ್ಯ ನಿಷ್ಠೆ ಸಮಾಜದಲ್ಲಿ ಬದಲಾವಣೆ ಸಾಧ್ಯ: ಮೇಘಣ್ಣನವರ್

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಪೊಲೀಸರ ಹಾಗೂ ಪತ್ರಕರ್ತರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಹೇಳಿದರು.

ಅವರು ನಗರದ ಸೇಂಟ್ ಥಾಮಸ್ ಶಾಲೆಯಲ್ಲಿ ಪೊಲೀಸ್ ಇಲಾಖೆ, ತಾಲೂಕ ಪತ್ರಕರ್ತರ ವತಿಯಿಂದ ಆಯೋಜಿಸಿದ್ದ ಸಮಾಜದ ಸುಧಾರಣೆಯಲ್ಲಿ ಪೊಲೀಸರ ಹಾಗೂ ಪತ್ರಕರ್ತರ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆಯಿಂದ ಬಾಳುವುದು ಅವಶ್ಯಕವಾಗಿದ್ದು, ಶಾಂತಿ, ಸೌಹಾರ್ದತೆಗೆ ಶಹಾಬಾದ ಮಾದರಿಯಾಗಿದೆ ಎಂದು ಹೇಳಿದರು.

ಉಪನ್ಯಾಸಕರಾಗಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಮಾತನಾಡಿ, ಯಾವುದೇ ವಿಷಯ ಕುರಿತು ಪೊಲೀಸರಿಗೆ ಹಾಗೂ ಪತ್ರಕರ್ತರಿಗೆ ವಿಷಯ ವಸ್ತುನಿಷ್ಠತೆ, ಅದರ ಪಾದರ್ಶಕತೆ ಅತ್ಯವಶ್ಯಕವಾಗಿದೆ, ಇತ್ತಿಚೀನ ದಿನಗಳಲ್ಲಿ ಅತಿ ಅಸೆಯಿಂದ ಮೋಸ ಹೋಗುತ್ತಿರುವುದರಿಂದ ಸೈಬರ್ ಕ್ರೈಂಗಳೂ ನಿತ್ಯ ಕಂಡು ಬರುತ್ತೀವೆ. ಇಂತಹ ಸಂದರ್ಭದಲ್ಲಿ ಪೊಲೀಸರೊಂದಿಗೆ ಪತ್ರಕರ್ತರ ವಸ್ತುನಿಷ್ಠ ವರದಿ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಂಬಿಕೆಗೆ ಅರ್ಹವಲ್ಲದೆ, ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿರುವುದರಿಂದ ಇಂದು ಸಹ ಪತ್ರಿಕೆಗಳು ವಿಶ್ವಾಸರ್ಹವಾಗಿವೆ. ಎಷ್ಟೋ ಪ್ರಕರಣಗಳಲ್ಲಿ ಪೊಲೀಸ್ ತನಿಖೆಗೆ ಪತ್ರಕರ್ತರ ವರದಿಗಳ ಸಹಕಾರಿಯಾಗಿವೆ, ಪೊಲೀಸ್ ಇಲಾಖೆಗೆ ತಮ್ಮದೆಯಾದ ಭದ್ರತೆಯಿದೆ, ಆದರೆ, ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲಾ, ಇದೊಂದು ಬಿಟ್ಟರೆ ಪೊಲೀಸರ, ಪತ್ರಕರ್ತರ ಕಾರ್ಯ ವೈಖರಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಹೇಳಿದ ಅವರು, ಕರೋನಾ ಸಂದರ್ಭದಲ್ಲಿ ಪೊಲೀಸರು, ಪತ್ರಕರ್ತರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಕರ್ತವ್ಯ ನಿರ್ವಹಿಸಿರುವುದು. ಈ ಶತಮಾನದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ದೇವೆಂದ್ರಪ್ಪ ಕಪನೂರ ಮಾತನಾಡಿ, ಇಂದು ದೃಶ್ಯ ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳು ಸುದ್ದಿ ಕೊಡುವ ಭರದಲ್ಲಿ ತಿರುಚಿ, ಸುಳ್ಳು ಸುದ್ದಿ ಹರಡಿಸುತ್ತಿದ್ದು, ದುರಂತದ ಸಂಗತಿಯಾಗಿದೆ. ಆದರೆ, ಮುದ್ರಣ ಮಾಧ್ಯಮ ಇದಕ್ಕೆ ವ್ಯತಿರಿಕ್ತವಾಗಿ ಸಂಪೂರ್ಣ ವಿಶ್ವಾಸರ್ಹವಾಗಿವೆ. ಪತ್ರಕರ್ತರು ಸಾಕ್ಷಿ ಇಲ್ಲದೇ, ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದು  ಅಪರಾಧವಾಗಿದೆ, ಇದಕ್ಕೆ ಪತ್ರಕರ್ತರು ವಿಶೇಷವಾಗಿ ಮುದ್ರಣ ಮಾಧ್ಯಮದ ವರದಿಗಾರರ ಜವಾಬ್ದಾರಿ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾನಿಧ್ಯ ವಹಿಸಿದ್ದ ಸೇಂಟ್ ಥಾಮಸ್ ಚರ್ಚಿನ ಧರ್ಮಗುರು ಫಾದರ ಜೇರಾಲ್ಟ್ ಸಾಗರ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಚವ್ಹಾಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಸಿಪಿಐ ನಟರಾಜ ಲಾಡೆ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿರೇಂದ್ರ ಕೊಲ್ಲೂರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಡಾ. ಎಂ.ಎ.ರಶೀದ, ದಸಂಸ ರಾಜ್ಯ ಸಂ.ಸ ಚಾಲಕ ಮರೆಪ್ಪ ಹಳ್ಳಿ, ಕೃಷ್ಣಾರೆಡ್ಡಿ ಹಿರೆಡ್ಡಿ ಕೊಲ್ಲೂರ, ಅಣವೀರ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ಶಿವುಕುಮಾರ ಇಂಗಿನಶೆಟ್ಟಿ, ಸಾಬೇರಾ ಬೇಗಂ, ಗುಂಡಮ್ಮಾ ಮಡಿವಾಳ, ಮ.ಉಬೇದುಲ್ಲಾ, ಸಿದ್ದಲಿಂಗ ಬಾಳಿ, ರಾಘವೇಂದ್ರ ಎಂ.ಜಿ. ಜಗನ್ನಾಥ ಎಚ್.ಎಚ್. ಭೀಮರಾವ ಮೇಟಿ, ಬಾಬುರಾವ ಪಂಚಾಳ, ಅರುಣಕುಮಾರ ಪಟ್ಟಣಕರ್, ಪತ್ರಕರ್ತರಾದ ಜಹೀರ್ ಅಹ್ಮದ ಪಟವೇಗಾರ, ನಾಗರಾಜ ದಂಡಾವತಿ, ಖಾಜಾ ಪಟೇಲ, ಮ.ಮುಸ್ತಾಕ, ದಾಮೋಧರ ಭಟ್, ಶ್ರೀಪಾದ ಭಟ್, ಮುಖಂಡರಾದ ಅಬ್ದುಲ ಗನಿ ಸಾಬಿರ ಬಾರಿ. ಪೀರಪಾಶಾ, ದಿಲೀಪ ನಾಯಕ, ಶಂಕರ ಅಳ್ಳೊಳ್ಳಿ, ದೇವರಾಜ ರಾಠೋಡ, ರಾಜು ಜಂಬಗಿ, ಬಸವರಾಜ ಮದ್ರಕಿ, ಸುಭಾಷ ಜಾಪೂರ, ನಾಗಪ್ಪ ರಾಯಚೂರಕರ್, ಮಲ್ಲೇಶ ಭಜಂತ್ರಿ, ಶರಣು ವಸ್ತದ್, ಕನಕಪ್ಪ ದಂಡಗುಲಕರ್, ಪಿಎಸ್‌ಐ ಶ್ಯಾಮರಾಯ, ಎಎಸ್‌ಐ ಗುಂಡಪ್ಪ, ಪೊಲೀಸ್ ಸಿಬ್ಬಂದಿ ದೊಡ್ಡಪ್ಪ ಪೂಜಾರಿ, ಹುಸೇನ ಪಾಶಾ, ಕಾಮಯ್ಯ ಗುತ್ತೇದಾರ, ಜಹೀರ ಅಹ್ಮದ, ಕೃಷ್ಣಪ್ಪ ಕರಣಿಕ, ಭೀಮರಾವ ಸಾಳೊಂಕೆ, ರಫೀಕ್ ಬಾಗಬಾನ್, ಬಸವರಾಜ ಬಿರಾದಾರ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಸ್ವಾಗತಿಸಿದರು. ಭಾವನಾ ಸಿಂಗ್ ಪ್ರಾರ್ಥಿಸಿದರು, ಕೆ.ರಮೇಶ ಭಟ್ ಪ್ರಾಸ್ತಾವಿಕ ಮಾನತಾಡಿದರು. ಲೋಹಿತ ಕಟ್ಟಿ ನಿರೂಪಿಸಿದರು, ನಿಂಗಣ್ಣ ಜಂಬಗಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೆ ಮುಂಚೆ, ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಒಂದು ನಿಮಿಷ ಮೌನ ಆಚರಿಸಿ, ಶೃದ್ದಾಂಜಲಿ ಅರ್ಪಿಸಲಾಯಿತು.

ಶಹಾಬಾದ ವರದಿ-ನಾಗರಾಜ್ ದಂಡಾವತಿ.

Spread the love

Leave a Reply

Your email address will not be published. Required fields are marked *

error: Content is protected !!