Oplus_131072

ಚಿತ್ತಾಪುರ ಕಂಬಳೇಶ್ವರ ಶ್ರೀಗಳ 58 ನೇ ಜನ್ಮದಿನದ ನಿಮಿತ್ತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ: ಡಾ.ಕಾಂತಾ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು ಪ್ರಮುಖ ಅಂಗವಾಗಿದೆ ಹೀಗಾಗಿ ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಪಟ್ಟಣದ ಖ್ಯಾತ ವೈದ್ಯ ಡಾ.ಪ್ರಭುರಾಜ ಕಾಂತಾ ಹೇಳಿದರು.

ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದಲ್ಲಿ ಶ್ರೀ ಸೋಮಶೇಖರ ಶಿವಾಚಾರ್ಯರ 58 ನೇ ಜನ್ಮದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಉದ್ಘಾಟನಾ ನೆರವೇರಿಸಿ ಮಾತನಾಡಿದ ಅವರು, ಕಣ್ಣಿನ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು. ಶ್ರೀಗಳ ಜನ್ಮದಿನದ ಅಂಗವಾಗಿ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಕಣ್ಣು ಜೀವನದ ಪ್ರಮುಖ ಅಂಗ, ವಾಹನಕ್ಕೆ ಎರಡು ಲೈಟ್ ಎಷ್ಟು ಮುಖ್ಯವೋ ಮನುಷ್ಯನಿಗೆ ಎರಡು ಕಣ್ಣು ಅಷ್ಟೇ ಪ್ರಮುಖವಾದುದು, ಜೀವನಕೆ ಬೆಳಕು ನೀಡುವ ಕಣ್ಣುಗಳ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು, ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬೇಕಾದರೆ ಹೊರಗಡೆ ಹೆಚ್ಚು ಹಣ ಖರ್ಚಾಗುತ್ತದೆ ಹೀಗಾಗಿ ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕಳ್ಳಲಾಗಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ಮಲ್ಲಣ್ಣ ಮಾಸ್ಟರ್ ಮುಡಬೂಳ, ನಾಗರೆಡ್ಡಿ ಗೋಪಸೇನ್, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ನಾಗರಾಜ ರೇಷ್ಮಿ, ರಮೇಶ್ ಬೊಮ್ಮನಳ್ಳಿ, ಶ್ರೀಕಾಂತ್ ಸುಲೇಗಾಂವ, ವೀರಣ್ಣ ಸುಲ್ತಾನಪೂರ, ಮಲ್ಲು ಇಂದೂರ, ಪ್ರಸಾದ್ ಅವಂಟಿ, ಸಂಗಮೇಶ ರೋಣದ್, ಶಿವರಾಜ್ ಮೇತ್ರಿ, ರಾಚಪ್ಪ ಬೊಮ್ಮನಳ್ಳಿ, ವಿಕ್ರಮ್ ಪಾಟೀಲ ಮಾರಡಗಿ, ಮಹೇಶ್ ಕಾಶಿ, ವಿಠಲ್ ಕಟ್ಟಿಮನಿ, ದೇವಪ್ಪ ಅಲ್ಲೂರ, ಕಲ್ಲಶೆಟ್ಟಿ ಸೇರಿದಂತೆ ಇತರರು ಇದ್ದರು. ಪತ್ರಕರ್ತ ಜಗದೇವ ದಿಗ್ಗಾಂವಕರ್ ನಿರೂಪಿಸಿದರು. ಕಲಬುರಗಿಯ ಅನುಗ್ರಹ ಆಸ್ಪತ್ರೆ ವೈದ್ಯರು ಕಣ್ಣಿನ ತಪಾಸಣೆ ಹಾಗೂ ಚಿತ್ತಾಪುರ ಸರ್ಕಾರಿ ಆಸ್ಪತ್ರೆಯ ನಿಜಾಮೋದ್ದಿನ್ ಸಂಗಮೇಶ ಅವರು ಶುಗರ್, ಬಿಪಿ ತಪಾಸಣೆ ಮಾಡಿದರು.

Spread the love

Leave a Reply

Your email address will not be published. Required fields are marked *

error: Content is protected !!