Oplus_131072

ನಾಸಾದಲ್ಲಿ ಪ್ರಥಮ ಬಹುಮಾನ ಪಡೆದ ಜೈಶಾ, ಆರನಾ ಅವರಿಗೆ ಗೌರವ ಸತ್ಕಾರ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಸಾಧನೆ ಸಾಧ್ಯ: ಹಿರೇಮಠ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಎನಾದರೂ ಸಾಧನೆ ಮಾಡಲು ಸಾಧ್ಯ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಎಎ ಫಂಕ್ಷನ್ ಹಾಲ್ ನಲ್ಲಿ ಚಿತ್ತಾಪುರ ನಾಗರಿಕರ ವತಿಯಿಂದ ನಾಸಾದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಜೈಶಾ ಫಾಲಕ್ ಮತ್ತು ಆರನಾ ಉತ್ತರಕರ್ ಇವರಿಗೆ ಹಮ್ಮಿಕೊಂಡಿದ್ದ ಗೌರವ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿಲ್ಲ ಮುಂದುವರೆದಿದ್ದೇವೆ ಎನ್ನುವುದಕ್ಕೆ ಈ ಭಾಗದ ಇಬ್ಬರು ಮಕ್ಕಳು ನಾಸಾದಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದೇ ತಾಜಾ ಉದಾಹರಣೆಯಾಗಿದೆ ಎಂದರು.

ಜೈಶಾ ಫಾಲಕ್ ಮಾತನಾಡಿ, ಜೀವನದಲ್ಲಿನ ಕೀಳರಿಮೆ ತೆಗೆಯಬೇಕು, ಯಶಸ್ವಿಯಾಗಬೇಕಾದರೆ ಮೊದಲು ಒಂದು ಯೋಜನೆ ಹಾಕಿಕೊಳ್ಳಬೇಕು ಅದರಂತೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು, ಮೊದಲು ಗುರಿ ಸ್ಪಷ್ಟವಾಗಿರಬೇಕು ಅಂದಾಗ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಬಾಬು ಕಾಶಿ ಅವರು ಮಾತನಾಡಿದರು.

ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ನಟರಾಜ್ ಲಾಡೆ, ಪಿಎಸ್ಐ ಶ್ರೀಶೈಲ್ ಅಂಬಾಟಿ, ತಿರುಮಲೇಶ್, ಚಂದ್ರಾಮಪ್ಪ, ಕಾಳಗಿ ತಾಪಂ ಇಒ ಡಾ.ಬಸಲಿಂಗಪ್ಪ ಡಿಗ್ಗಿ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರ್, ಓರಿಯಂಟ್ ಸಿಮೆಂಟ್ ಮುಖ್ಯಸ್ಥ ಸತ್ಯಬ್ರತ್ ಶರ್ಮಾ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ.ಶಿವಶರಣಪ್ಪ ಬಿರಾದಾರ, ಮೋಯಿನ್ ಖಾಜಿ, ಡಾ.ಪ್ರಭುರಾಜ ಕಾಂತಾ, ಅಜೀಜ್ ಸೇಟ್, ಮಲ್ಲಿಕಾರ್ಜುನ ಕಾಳಗಿ, ರಸೂಲ್ ಮುಸ್ತಫಾ, ಸಾಬಣ್ಣ ಕಾಶಿ, ಎಂ.ಎ.ರಷೀದ್, ಆರೀಫ್ ನಂದ್ಯಾಳ, ಅಬ್ದುಲ್ ಕಲೀಮ್, ಅಬ್ದುಲ್ ನಯೀಮ್, ನಜೀರ್ ಆಡಕಿ, ಅಬ್ದುಲ್ ಗಫೂರ್, ಮಲ್ಲಿಕ್, ರಫೀಕ್ ಲಿಂಕ್, ರಾಜಶೇಖರ್ ತಿಮ್ಮನಾಯಕ, ಇರ್ಫಾನ್ ಗೋಲಾ, ಸಂಜಯ ಬುಳಕರ್, ರವಿಸಾಗರ ಹೊಸಮನಿ, ದೇವು ಯಾಬಾಳ, ತಮ್ಮಣ್ಣ ಡಿಗ್ಗಿ, ವೀರಣ್ಣ ಸುಲ್ತಾನಪೂರ, ಗಂಗಾಧರ್ ಡಿಗ್ಗಿ, ಭೀಮಸಿಂಗ್ ಚವ್ಹಾಣ, ತಿರುಪತಿ ಚವ್ಹಾಣ, ಶೀರಾಜ್, ಖಾಜಾ ಬಾದಲ್, ಸಾಬೇರ್, ಉಫ್ರಾನ್, ಶರೀಫ್ ದಂಡೋತಿ, ದೇವಿದಾಸ ಚವ್ಹಾಣ, ಸುರೇಶ್ ಗುತ್ತೇದಾರ, ಸಂತೋಷ ಪೂಜಾರಿ ಸೇರಿದಂತೆ ಇತರರು ಇದ್ದರು.

ಪೀರ್ ಪಾಶಾ ಪ್ರಾಸ್ತಾವಿಕವಾಗಿ ಮಾತನಾಡಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!