ಚಿತ್ತಾಪುರ ಬುದ್ಧ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆ, ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ನೀಡಿದ ದಿನವೇ ಗುರುಪೂರ್ಣಿಮೆ: ಬೆಣ್ಣೂರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೌದ್ಧರು ಸಾಂಪ್ರದಾಯಿಕವಾಗಿ ಗುರುಪೂರ್ಣಿಮೆ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಜಗತ್ತಿನೆಲ್ಲೆಡೆ ಬೌದ್ಧರು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದ ಬುದ್ಧ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರು ಪೂರ್ಣಿಮೆಯನ್ನು ಬೌದ್ಧ ಧರ್ಮದಲ್ಲಿ ಭಗವಾನ್ ಬುದ್ಧನಿಗೆ ಗೌರವ ಸಲ್ಲಿಸಲು ಆಚರಿಸಲಾಗುತ್ತದೆ. ಈ ದಿನದಂದು ಬುದ್ಧನು ತನ್ನ ಮೊದಲ ಐದು ಶಿಷ್ಯರಿಗೆ ಸಾರನಾಥದಲ್ಲಿ ಧರ್ಮೋಪದೇಶವನ್ನು ಮಾಡಿದರು ಎಂದು ನಂಬಲಾಗಿದೆ. ಇದು ಬೌದ್ಧರಿಗೆ ತಮ್ಮ ಗುರುಗಳನ್ನು ಮತ್ತು ಅವರ ಬೋಧನೆಗಳನ್ನು ಸ್ಮರಿಸಲು ಒಂದು ವಿಶೇಷ ದಿನವಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಉಪನ್ಯಾಸ ನೀಡಿದರು, ಹಿರಿಯ ಮುಖಂಡ ರಾಜಪ್ಪ ಹುಂಡೇಕಾರ ಉದ್ಘಾಟಿಸಿದರು. ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ಜಗನ್ನಾಥ ಮುಡಬೂಳಕರ್ ಪ್ರಾರ್ಥನೆ ಸಲ್ಲಿಸಿದರು, ನಾಗೇಂದ್ರ ಬುರ್ಲಿ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

