Oplus_131072

ಚಿತ್ತಾಪುರ ವೀರಶೈವ ಲಿಂಗಾಯತ ಸಮಾಜದ ಸಭೆ, ಬಸವ ಭವನಕ್ಕೆ ಶೀಘ್ರ ಭೂಮಿ ಖರೀದಿಸಲು ಮುಖಂಡರು ಒಗ್ಗೂಡಿ ಕೆಲಸ ಮಾಡಿ: ರಮೇಶ್ ಮರಗೋಳ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದಲ್ಲಿ ಭವ್ಯ ಸುಸಜ್ಜಿತ ಬಸವ ಭವನ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಅನುದಾನ ನೀಡುವ ಭರವಸೆ ನೀಡಿದ್ದು, ಅದಕ್ಕಾಗಿ 2 ಎಕರೆ ಭೂಮಿ ಖರೀದಿಸಲು ಸಮಾಜದ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಬಸವ ಭವನ ನಿರ್ಮಾಣ ಸಮನ್ವಯ ಸಮಿತಿಯ ನೂತನ ಅಧ್ಯಕ್ಷ ರಮೇಶ ಮರಗೋಳ ಹೇಳಿದರು.

ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬಸವ ಭವನ ನಿರ್ಮಾಣ ಪ್ರಯುಕ್ತ ಭೂಮಿ ಖರೀದಿ ಸಲುವಾಗಿ ನಡೆದ ವೀರಶೈವ ಲಿಂಗಾಯತ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಸವ ಭವನಕ್ಕಾಗಿ ಪಕ್ಷಬೇಧ ಮರೆತು ಸಮಾಜದ ನಿಯೋಗ ಈಚೇಗೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ಮಾಡಿದಾಗ ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದು, ಭವನ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಅನುದಾನ ನೀಡಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ ಎಂದರು.

ಮುಖಂಡ ಶಿವಾನಂದ ಪಾಟೀಲ್ ಮಾತನಾಡಿ, ಬಸವ ಭವನದ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಈ ನಿಟ್ಟಿನಲ್ಲಿ ಆರ್ಥಿಕವಾಗಿ ಸಹಾಯ ಮಾಡಬೇಕು. ಜಿಲ್ಲೆಯಲ್ಲಿ ಇದೊಂದು ಮಾದರಿ ಭವನ ಆಗುವಂತೆ ಎಲ್ಲರೂ ಶ್ರಮಿಸಬೇಕಿದೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ, ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಸೋಮಶೇಖರ ಪಾಟೀಲ್ ಬೆಳಗುಂಪಾ, ಭೀಮರೆಡ್ಡಿ ಕುರಾಳ ಅವರು ಮಾತನಾಡಿದರು.

ಸಭೆಯಲ್ಲಿ ಮುಖಂಡರಾದ ಶಿವರಾವ ಪಾಟೀಲ್ ಬೆಳಗುಂಪಾ, ಶಿವಲಿಂಗಪ್ಪ ವಾಡೇದ್, ಮಲ್ಲಿನಾಥ ಇಂದೂರ, ಬಸವರಾಜ ಇಂಗಿನ್, ರವಿಂದ್ರ ಸಜ್ಜನಶೆಟ್ಟಿ, ಬಸವರಾಜ ಪಾಟೀಲ ಬೆಳಗುಂಪಾ, ಡಾ.ಚಂದ್ರಶೇಖರ ಕಾಂತಾ, ಮಹಾಂತಗೌಡ ಪಾಟೀಲ ಭಾಗೋಡಿ, ರಾಮರೆಡ್ಡಿ ಕೊಳ್ಳಿ, ರಮೇಶ ಬೋಮ್ಮನಳ್ಳಿ, ರವಿಂದ್ರರೆಡ್ಡಿ ಭಂಕಲಗಿ, ಓಂಕಾರ ರೇಷ್ಮಿ, ಅಣ್ಣಾರಾವ ಬಾಳಿ, ಆನಂದಗೌಡ ಸಂಕನೂರ, ಶರಣಗೌಡ ಪಾಟೀಲ್ ಚಾಮನೂರ, ಶರಣಗೌಡ ಭೀಮನಳ್ಳಿ, ಸಿದ್ದಣ್ಣಗೌಡ ಮಾಲಿ ಪಾಟೀಲ್, ನಾಗರೆಡ್ಡಿ ಗೋಪಸೇನ್, ವೀರಣ್ಣ ಸುಲ್ತಾನಪೂರ, ರವಿ ಇವಣಿ, ರಾಜಶೇಖರ ಯದ್ಲಾಪೂರ, ಸಿದ್ದು ರಾಜಾಪೂರ, ಬಸವರಾಜ ಸಂಕನೂರ್, ಉದಯಕುಮಾರ್ ಸಿಂಪಿ, ಸಿದ್ದಣ್ಣಗೌಡ ಆರ್.ಡಿ ಸೇರಿದಂತೆ ಇತರರು ಇದ್ದರು.

ಶಾಂತಣ್ಣ ಚಾಳೀಕಾರ ನಿರೂಪಿಸಿದರು, ಜಗಣ್ಣಗೌಡ ರಾಮತೀರ್ಥ ಸ್ವಾಗತಿಸಿದರು, ಅಂಬರೀಶ್ ಸುಲೇಗಾಂವ ವಂದಿಸಿದರು.

ತಾಲೂಕು ಅಧ್ಯಕ್ಷರು ಗೈರು ಚರ್ಚೆಗೆ ಗ್ರಾಸ:

ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಸಭೆಯಲ್ಲಿ ಗೈರು ಹಾಜರಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಒಂದೆಡೇ ಆದರೆ, ಇನ್ನೊಂದೆಡೆ ಹಿರಿಯ ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ ಗೈರು ಹಾಜರಿ ಎದ್ದು ಕಂಡುಬಂತು.

ಸಮಿತಿ ಪದಾಧಿಕಾರಿಗಳ ಆಯ್ಕೆ:

ಅಖಿಲ ಭಾರತ ವೀರಶೈವ ಲಿಂಗಾಯತ ಬಸವ ಭವನ ನಿರ್ಮಾಣ ಸಮನ್ವಯ ಸಮಿತಿಯ ನೂತನ ಗೌರವಾಧ್ಯಕ್ಷರಾಗಿ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷರಾಗಿ ರಮೇಶ ಮರಗೋಳ, ಉಪಾಧ್ಯಕ್ಷರಾಗಿ ಭೀಮರೆಡ್ಡಿ ಕುರಾಳ, ಬಸವರಾಜ ಪಾಟೀಲ ಬೆಳಗುಂಪಾ, ಕಾರ್ಯದರ್ಶಿಯಾಗಿ ಆನಂದ ಪಾಟೀಲ ನರಿಬೋಳ, ಖಜಾಂಚಿಯಾಗಿ ಜಗಣ್ಣಗೌಡ ರಾಮತೀರ್ಥ ಅವರು ಆಯ್ಕೆಯಾಗಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!