Oplus_131072

ಕಾಡಾ ಮಾಜಿ ನಿರ್ದೇಶಕ ಮಲ್ಲಿನಾಥ ಕೋಲಕುಂದಿ ಅವರ 50ನೇ ಜನ್ಮದಿನದ ನಿಮಿತ್ತ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ಕೋಡ್ಲಿ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷ ಹಾಗೂ ಕಲಬುರಗಿ ಕಾಡಾ ಮಾಜಿ ನಿರ್ದೇಶಕರು, ಬಿಜೆಪಿ ಯುವ ಮುಖಂಡ ಮಲ್ಲಿನಾಥ ರಾಮಶೆಟ್ಟಿ ಕೋಲಕುಂದಿ ಅವರ 50 ನೇ ವರ್ಷದ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಕೋಡ್ಲಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.

ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸುಮಾರು 1500 ನೋಟ್ ಬುಕ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡ ರಾಮಕುಮಾರ ಮಲ್ಲಿನಾಥ ಕೋಲಕುಂದಿ, ಬಿಜೆಪಿ ಯುವ ಮುಖಂಡರಾದ ಜಗಧೀಶ ಮಾಲಿಪಾಟೀಲ್, ಉಮೇಶ ಯಲ್ಮಡಗಿ, ಸಂಗಮೇಶ ತಾಂಡೂರ, ಬಸವರಾಜ ಕರಕಮುಕಳಿ, ತೋಟಪ್ಪ ತಾಂಡೂರ, ಮಾಜಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ತಾಂಡೂರ, ಪ್ರೇಮಕುಮಾರ ಸುಂಠಾಣ, ಎಸ್.ಡಿ. ಎಮ್.ಸಿ ಅಧ್ಯಕ್ಷ ಗಿರೀಶರೆಡ್ಡಿ ಕಪರಗಿ, ಸಿದ್ದು ಎಸ್. ಬುಬುಲಿ, ಜಗನ್ನಾಥ ಮೊಘಾ, ಶಿವಲಿಂಗಪ್ಪ ಸುಲೇಪೆಟ್, ಸಂತೋಷ ಸುಂಠಾಣ, ಮಲ್ಲಪ್ಪ ಚಿಂತಕೋಟಾ, ಅಲಿಂ ನೈಕೋಡಿ, ಹಣಮಂತ ಆಡಕಿ, ಉಮೇಶ ಗುತ್ತೇದಾರ, ಹಣಮಂತರಾಯ ಡೊಣ್ಣೂರ, ನಾಗರಾಜ ವಜ್ರಗಿ, ಗುಂಡು ಹಡಪದ, ನಾಗು ಕುಂಬಾರ, ಶ್ರೀನಿವಾಸ ಪೂಜಾರಿ, ಅಖಿಲೇಶ ಪೆದ್ದಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!