ಮಹಾತ್ಮ ಗಾಂಧೀಜಿ ಜಯಂತಿ ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿ ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಅಕ್ಟೋಬರ್ 2 ರಂದು ಮಹಾತ್ಮ ಗಾಂದಿಜೀ ರವರ ಜಯಂತಿ ಆಚರಣೆ ಕುರಿತಂತೆ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಅಧಿಕಾರಿಗಳಾಗಲಿ ಯಾವುದೇ ಸಮಾಜದ ಅಧ್ಯಕ್ಷರು ಹಾಗೂ ಮುಖಂಡರು ಮತ್ತು ಸಂಘಟನೆಗಳ ಮುಖಂಡರು, ಸಾಹಿತಿಗಳು, ಹಾಗೂ ಸಾರ್ವಜನಿಕರು ಸಭೆಗೆ ಬಾರದೆ ಇರುವುದಕ್ಕೆ ತಹಸೀಲ್ದಾರ್ ತೀವ್ರ ಬೇಸರ ವ್ಯಕ್ತಪಡಿಸಿದರು. ರಾಷ್ಟ್ರಪತಿ ಗಾಂಧೀಜಿ ಅವರಿಗೆ ಮಾಡಿದ ಅವಮಾನ ಮತ್ತು ಅಗೌರವ ತೋರಿಸಿದಂತೆ ಆಗಿದೆ, ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ ಕಳೆದ ಸೆ.23 ಕ್ಕೆ ಎಲ್ಲರಿಗೂ ಸಭೆಯ ನೋಟಿಸ್ ಕಳಿಹಿಸಿದರೂ ಸಹ ಸಭೆಗೆ ಬಾರದೆ ಗೈರಾಗಿದ್ದು ಸರಿಯಲ್ಲ, ಯಾವುದೇ ಪೂರ್ವಭಾವಿ ಸಭೆ ಇರಲಿ ಸಮಯ ಬಿಡುವ ಮಾಡಿಕೋಂಡು ಸಭೆಗೆ ಹಾಜರಾಗಬೇಕು ಇನ್ನೂ ಮುಂದೆ ಗೈರಾಗುವ ಚಾಳಿ ಬಿಟ್ಟುಬಿಡಿ ಎಂದು ಸೂಚಿಸಿದರು.
ಕೇವಲ ನಾಲ್ಕೈದು ಸಿಬ್ಬಂದಿಗಳು ಹಾಜರಿದ್ದರು, ಹೀಗಾಗಿ ಸಭಾಂಗಣದಲ್ಲಿ ಕುರ್ಚಿಗಳು ಖಾಲಿ ಖಾಲಿಯಾಗಿ ಕಂಡುಬಂದವು. ಇದೊಂದು ಕಾಟಾಚಾರದ ಸಭೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂತು.
ಸಭೆಯಲ್ಲಿ ಕೇವಲ ಗ್ರೇಡ್ -2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಎಪಿಎಂಸಿ ಕಾರ್ಯದರ್ಶಿ ಸವೀತಾ ಗೋಣಿ, ಕೃಷಿ ಇಲಾಖೆಯ ಫಿರೋಜ್ ಅಹ್ಮದ್, ಪಶು ಇಲಾಖೆಯ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಸಾಯಿರೆಡ್ಡಿ, ಚಿತ್ತಾಪುರ ಪುರಸಭೆಯ ನವೀನ್ ಕುಮಾರ್, ವಾಡಿ ಪುರಸಭೆಯ ಬಸವರಾಜ, ಕಂದಾಯ ನಿರೀಕ್ಷಕ ಮಹ್ಮದ್ ಸುಬಾನ್ ಮಾತ್ರ ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಹಾಜರಿದ್ದರು.