Oplus_0

ಕರ್ನಾಟಕದಲ್ಲಿ ಅಲೆಮಾರಿಗಳನ್ನು ಮತ್ತೆ ಬೀದಿ ಪಾಲು ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ: ಅಯ್ಯಪ್ಪ ರಾಮತೀರ್ಥ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಾಗಮೋಹನ್ ದಾಸ್ ಆಯೋಗವು ಅಲೆಮಾರಿ ಜಾತಿ ಗುಂಪಿಗೆ ನೀಡಿದ್ದ ಶೇ.1 ಮೀಸಲಾತಿ ಎಂಬ ಅನ್ನವನ್ನು ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ ಅದನ್ನು (ಸಿ) ಬಲಾಢ್ಯರ ಗುಂಪಿಗೆ ಸೇರಿಸಿದ್ದು ಅಕ್ಷಮ್ಯ ಅಪರಾಧ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಒಳಮೀಸಲಾತಿ ಹೋರಾಟಗಾರ ಅಯ್ಯಪ್ಪ ರಾಮತೀರ್ಥ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾರದೋ ಅಸಹಾಯಕರ ಅನ್ನವನ್ನು ಕಸಿದು ಇನ್ಯಾರೋ ಹೊಟ್ಟೆ ತುಂಬಿದವರಿಗೆ ನೀಡುವ ಹಾಗೂ ಬಲಾಡ್ಯ ಸಮುದಾಯಗಳ ಜೊತೆಗೆ ಅಸಹಾಯಕ ಸಮುದಾಯಗಳು ಹೇಗೆ ಸ್ಪರ್ಧಿಸಲು ಸಾಧ್ಯ.? ಇಂತಹ ರಾಕ್ಷಸಿ ಮನೋಧರ್ಮವನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಆ.19 ರಂದು ಎಸ್ಸಿ 101 ಜಾತಿಗಳ ಒಳ ಮೀಸಲಾತಿಯ ಕಲ್ಪಿಸುವ ಸಂಬಂಧ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾದಿಗ ಸಂಬಂಧಿತ (A )ಗುಂಪಿಗೆ 6, ಹೊಲೆಯ ಸಂಬಂಧಿತ (B) ಗುಂಪಿಗೆ 6, ಹಾಗೂ ಭೋವಿ ಬಂಜಾರ, ಅಲೆಮಾರಿಗಳ ಸಂಬಂಧಿತ (ಸಿ) ಗುಂಪಿಗೆ 5, ಮೀಸಲಾತಿಯನ್ನು ಕಲ್ಪಿಸಿದ್ದು, ಇಲ್ಲಿ (ಸಿ) ಗುಂಪಿಗೆ ಸೇರಿಸಿರುವ ಅಲೆಮಾರಿ ಸಮುದಾಯಗಳ ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಇಂತಹ ಕ್ರಮದ ಸರ್ಕಾರವನ್ನು ನಾವು ಸಾಮಾಜಿಕ ನ್ಯಾಯದ ಸರ್ಕಾರ ಎನ್ನಬಹುದೇ.? ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು. ಅಂದರೆ ಇದೇನೇ? ಕಾಂಗ್ರೆಸ್ ಸರ್ಕಾರದ ಇಂತಹ ಅನ್ಯಾಯದ ಕ್ರಮವನ್ನು ಒಪ್ಪಬೇಕೆ ಎಂದು ಪ್ರಶ್ನಿಸಿದ್ದಾರೆ.

ಸದಾಕಾಲ ಬುದ್ಧ ಬಸವ, ಅಂಬೇಡ್ಕರ್ ರವರ ಸಿದ್ದಾಂತವನ್ನು ಬಡಬಡಿಸುವ ಎಚ್. ಸಿ ಮಹದೇವಪ್ಪ ನವರೇ ತಮ್ಮ ಇಲಾಖೆಯಿಂದ ಇಂತಹ ಅನ್ಯಾಯ ಮತ್ತು ದ್ರೋಹದ ಟಿಪ್ಪಣಿಯನ್ನು ಯಾರೂ ಮತ್ತು ಯಾಕೆ? ರೂಪಿಸಿದರು ಎಂಬುದನ್ನು ನೀವು ಜನತೆಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ವರದಿಯನ್ನು ಗಾಳಿಗೆ ತೂರಿ ತಮ್ಮ ಮನ ಬಂದಂತೆ ವರದಿಯನ್ನು ರೂಪಿಸಿಕೊಂಡು ಸುಪ್ರೀಂ ಕೋರ್ಟಿನ ಯಾವುದೇ ಮಾನದಂಡಗಳನ್ನು ಎಂಪೇರಿಕಲ್ ಡಾಟಾವನ್ನು ವಸ್ತುನಿಷ್ಠವಾಗಿ ಪರಿಗಣಿಸದೆ, ಇಷ್ಟು ದಿನಗಳ ಕಾಲಹರಣ ಮಾಡಿ ಸಾರ್ವಜನಿಕರ ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡಿಸಿ ಕಡೆಗೂ ಯಾರದೋ ಪ್ರಭಾವಕ್ಕೂ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಮತ್ತು ಮಹದೇವಪ್ಪನವರೇ ನಿಮ್ಮ ಈ ಸ್ವಾರ್ಥ ಗುಣ ಈ ನಾಡಿನ ಅಸಹಾಯಕರಿಗೆ ಮತ್ತು ಪ್ರಗತಿಪರ ಹಾಗೂ ಸಾಹಿತಿ ಹೋರಾಟಗಾರರಿಗೆ ಮಾಡಿದ ಅವಮಾನ ಹಾಗೂ ಅಲೆಮಾರಿಗಳಿಗೆ ಮಾಡಿದ ಮಹಾ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

59 ಅತೀ ಚಿಕ್ಕ ಸಮುದಾಯ ಗುಂಪುಗಳಿರುವ 5,22099 ಜನಸಂಖ್ಯೆ ಇರುವ ಅಲೆಮಾರಿ ಸಮುದಾಯಗಳಿಗೆ ಅವರ ಪಾಲು ಅವರಿಗೆ ಕೊಡಿಸಿ….ಇಲ್ಲದಿದ್ದರೆ ನೀವು ಕೇವಲ ಇತಿಹಾಸದಲ್ಲಿ ಭಟ್ಟಂಗಿಗಳಾಗಿ ಉಳಿಯುತ್ತೀರಿ. ಕರ್ನಾಟಕದಲ್ಲಿ ಅಂಬೇಡ್ಕರ್ ಸಿದ್ದಾಂತ ನೇಣಿಗೆರಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ… ಬುದ್ಧನ ಕರುಣೆಯನ್ನು ಸಮಾಧಿ ಮಾಡಿದವರು ನೀವಾಗುತ್ತಿರಿ ಎಂದು ತಿಳಿಸಿದ್ದಾರೆ.

ಅಲೆಮಾರಿಗಳಿಗಾದ ಈ ಘೋರ ಅನ್ಯಾಯವನ್ನು (ಸಿ) ಗುಂಪಿನಿಂದ ಪ್ರತ್ಯೇಕಿಸಿ, ಪುನರ್ ಪರಿಸ್ಕರಿಸಿ, ಪ್ರತ್ಯೇಕ ಗುಂಪು (D) ರಚಿಸಿ ಅವರ ಪಾಲು ಅವರಿಗೆ ಕೊಡಿಸಬೇಕು. ಇಲ್ಲದಿದ್ದರೆ ನಿಮ್ಮ ಕಾಂಗ್ರೆಸ್ ಸರ್ಕಾರವೇ ಅಲೆಮಾರಿ ಸಮುದಾಯಗಳಿಗೆ ವಿಷ ಕೊಟ್ಟಂತೆ ಎಂಬುದು ಮರೆಯಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!