ಚಿತ್ತಾಪುರ ಸಾವಿರ ಮನೆಗಳ ಹಂಚಿಕೆ ಸೆ.12 ಕ್ಕೆ ಮುಂದೂಡಿಕೆ: ಶ್ರೀಧರ್ ಸಾರವಾಡ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ನಾಗಾವಿ ದೇವಸ್ಥಾನದ ಹತ್ತಿರ ಸಾತನೂರು ರಸ್ತೆಯಲ್ಲಿ ನಿರ್ಮಿಸಲಾದ 1000 ಜಿ+1 ಮನೆಗಳ ಹಂಚಿಕೆಯು ಮಂಗಳವಾರ ನಡೆಯಬೇಕಿದ್ದ ಪ್ರಕ್ರಿಯೆ ಅನಿವಾರ್ಯ ಕಾರಣಗಳಿಂದ ಸೆಪ್ಟೆಂಬರ್ 12 ರಂದು ಮುಂದೂಡಲಾಗಿದೆ ಎಂದು ಕೊಳಗೇರಿ ಮಂಡಳಿಯ ಎಇಇ ಶ್ರೀಧರ್ ಸಾರವಾಡ್ ತಿಳಿಸಿದ್ದಾರೆ.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 9 ಮಂಗಳವಾರ ಮಧ್ಯಾಹ್ನ 1ಕ್ಕೆ ನಡೆಯಬೇಕಿದ್ದ ಸಮಾರಂಭ ರದ್ದಾಗಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಸೆಪ್ಟೆಂಬರ್ 12 ರಂದು ಮುಂದೂಡಲಾಗಿದೆ. ಅಂದು ಫಲಾನುಭವಿಗಳಿಗೆ ಮನೆಗಳ ಅಂಕಿ ಸಂಖ್ಯೆಗಳನ್ನು ನೀಡುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಉಪಾಧ್ಯಕ್ಷರು, ಸರ್ವ ಸದಸ್ಯರು, ರಾಜಕೀಯ ಧುರೀಣರು ಸಹಭಾಗಿತ್ವದಲ್ಲಿ ಈ ಸಮಾರಂಭ ನಡೆಯಲಿದೆ. ಹೀಗಾಗಿ ಪಟ್ಟಣದ ಎಲ್ಲ ಫಲಾನುಭವಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.
