Oplus_0

ಸೇಡಂ ಉಪ ಕಾರಾಗೃಹದಲ್ಲಿ ನಿಯಮಾನುಸಾರ ಅಡುಗೆ ಕೋಣೆ ನಿರ್ಮಿಸಲು ನಾಗೇಶ್ ಹಲಗಿ ಆಗ್ರಹ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಸೇಡಂ ಉಪ ಕಾರಾಗೃಹದಲ್ಲಿ ನಿಯಮಾನುಸಾರ ಅಡುಗೆ ಕೋಣೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಕಲಬುರಗಿ ವಿಭಾಗೀಯ ಸಂಚಾಲಕ ನಾಗೇಶ್ ಹಲಗಿ ಕಾರಾಗೃಹದ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಅಡುಗೆ ಕೋಣೆ ನಿರ್ಮಿಸುತ್ತಿರುವುದು ಕಂಡುಬಂದಿದ್ದು ಇದು ನಿಯಮಾನುಸಾರ ಇಲ್ಲದಿರುವ ಬಗ್ಗೆ ಮಾಹಿತಿ ಇದ್ದು, ಅದು ಟೀನ್ ಶೇಡ್‌ ನಲ್ಲಿ ನಿರ್ಮಿಸುವುದರಿಂದ ಎಫ್.ಎಸ್.ಎಸ್.ಐ. ಮತ್ತು ಐ.ಎಸ್.ಒ. ಮೆಲ್ಛಾವಣಿ ಇರಬೇಕೆಂದು ಕಾನೂನಿನಲ್ಲಿ ನಿಯಮವಿದ್ದು ಆದರೆ ಅದರ ವಿರುದ್ಧ ನಿರ್ಮಿಸುವ ಮೂಲಕ ನಿಯಮ ಉಲ್ಲಂಘನೆ ಆಗಿದೆ ಎಂದು ತಿಳಿಸಿದ್ದಾರೆ.

ಕಾರಾಗೃಹದಲ್ಲಿ ಅಡುಗೆ ಕೋಣೆ ನಿರ್ಮಿಸುತ್ತಿದ್ದು, ಅದು ಟೀನ್ ಶೇಡ್‌ ನಿಂದ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿದ್ದು ಇರುತ್ತದೆ. ಆದರೆ ಅದು ನಿಯಮಾನುಸಾರ ಇರುವುದಿಲ್ಲ. ಹುಳ, ಸೊಳ್ಳೆ, ಕ್ರೀಮಿಕಿಟಗಳು, ವಿಶೇಷವಾಗಿ ಹಾವು ಚೇಳುಗಳು ಒಳಗಡೆ ಬರುವ ಸಂಭವವಿರುತ್ತದೆ. ಅವುಗಳು ದವಸದಾನ್ಯಗಳ ಒಳಗೆ ಸೇರಿ ವಿಷಪುರಿತ ಆಹಾರವಾಗುವ ಸಂಭವ ಇರುತ್ತದೆ. ಇದೆಲ್ಸ್ಗಳ ಮಷ್ಪರಿಣಾಮಗಳ ಪರಿಣಾಮವಾಗಿ ಬಂಧಿಖಾನೆಯ ಸಿಬ್ಬಂದಿ ಮತ್ತು ಬಂಧಿಗಳಿಗೆ ವಿಷಪುರಿತ ಆಹಾರ ನೀಡಲು ಅವಕಾಶವಾಗುತ್ತದೆ. ಆದ್ದರಿಂದ ಸದರಿ ಕಟ್ಟಡದ ಮೇಲ್ಛಾವಣಿ ಅಂದರೆ ಛತ್ತ ಸುತ್ತಲು ನಾಲ್ಕು ಭಾಗದ ಗೊಡೆ ಕಟ್ಟಿಸುವುದು ಕಾನೂನು ಬದ್ಧ ನಿಯಮವಾಗಿರುತದೆ. ಆದ್ದರಿಂದ ಯಾವುದಾದರೂ ಅನಾಹುತ ಆಕಾಸ್ಮಿಕವಾಗಿ ಸಂಭವಿಸಿದರೆ, ಅದರ ಪಕ್ಕದಲ್ಲೆ ನ್ಯಾಯಾಲಯವಿದ್ದು ಮತ್ತು ನ್ಯಾಯಾದೀಶ ಗೃಹ ಕೋಣೆಗಳು ಇದ್ದು ಮತ್ತು ಸಾರ್ವಜನಿಕರು ಕೋರ್ಟಿನ ಆವರಣದಲ್ಲಿ ಮತ್ತು ಹೋರಗಡೆ ಜನಸಂದಣಿಯಿಂದ ಇದೆ. ಕಾರಣ ಶೇಡ್ ನಲ್ಲಿ ಸೀಲೆಂಡರ್ ಸ್ಫೋಟಗೊಂಡು ಅನಾಹುತ ಆಗುವ ಸಂಭವ ಅಧಿಕವಾಗಿರುತ್ತದೆ ಹಾಗೂ ಮುಖ್ಯವಾಗಿ ಕಾರಾಗೃಹದಲ್ಲಿ ಅಪರಾಧಿಗಳು ಇರುವುದರಿಂದ ಅವರ ಮನಸ್ಥಿತಿ ಯಾವಾಗಲು ಒಂದೆ ತರ ಇರುವುದಿಲ್ಲ. ಅವರು ಹೆಚ್ಚಾಗಿ ಕೆಟ್ಟ ಉದ್ದೇಶವನ್ನು ಹೊಂದಿರುತ್ತಾರೆ. ಅವರ ಮನಸ್ಥಿತಿ ಕಾರಾಗೃಹದಲ್ಲಿ ಸಮತೋಲನದಲ್ಲಿರುವುದಿಲ್ಲ ಹೀಗಾಗಿ ಇದು ಅವರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಸರಕಾರ ಇದಕ್ಕಾಗಿ ಮಿಸಲಿಟ್ಟ ಸ್ಥಳ ಸರ್ವೆ ನಂ: 13 ಸೇಡಂ ತಾಲೂಕು ನೀಲಹಳ್ಳಿ ಗ್ರಾಮದಲ್ಲಿ 4 ಎಕರೆ ಜಮೀನು ಇದ್ದು, ಉಪ ಕಾರಾಗೃಹ ನಿರ್ಮಾಣಕ್ಕಾಗಿ ಮೀಸಲಿಟ್ಟ ಸ್ಥಳದಲ್ಲಿಯೆ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತವಾಗಿರುತ್ತದೆ. ಮುಂದೆ ಇದನ್ನು ಮೀರಿ ಕಾನೂನು ಬಾಹಿರವಾಗಿ ತಮ್ಮ ಸ್ವ ಇಚ್ಛೆಯಿಂದ ನಿರ್ಮಿಸಿದಲ್ಲಿ, ಮುಂದೆ ಆಗುವ ಅನಾಹುತಗಳಿಗೆ ನೇರಹೊಣೆ ಹೊರಬೇಕಾಗುತ್ತದೆ.

ಒಂದು ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ  ಸಂಘಟನೆ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!