Oplus_131072

ಯರಗಲ್ ಗ್ರಾಮದ ಅರ್ಜುನ ಮರೆಪ್ಪಾ ಜಮೀನು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನ್ಯಾಯಾಲಯದ ಆದೇಶದಂತೆ ಬಾಂಡ್ ಮೊತ್ತ ಭರಿಸದೆ ಇರುವುದರಿಂದ ಚಿತ್ತಾಪುರ ತಾಲೂಕಿನ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

Crl Misc No:453/2020, Cr NO:14/2019(RG Nagar PS V/s Jakeer &Ors) reg : ಆದೇಶದಂತೆ ಬಾಂಡ್ ಮೊತ್ತ ಭರಿಸುವಂತೆ ನೋಟಿಸ್-37 ಮತ್ತು ನೋಟಿಸ್-38 ನೀಡಲಾಗಿರುತ್ತದೆ ಆದರೆ ಕಂದಾಯ ನಿರೀಕ್ಷಕರು ಚಿತ್ತಾಪುರ ರವರು ಅರ್ಜುನ ತಂದೆ ಮರೆಪ್ಪಾ ರವರು ಯರಗಲ್ ಗ್ರಾಮದಲ್ಲಿ ಹಾಗೂ ಶಹಾಬಾದ ಪಟ್ಟಣದಲ್ಲಿ ವಾಸವಿರುವುದಿಲ್ಲ ಎಂದು ವರದಿ ಸಲ್ಲಿಸಿರುತ್ತಾರೆ. ವಿಚಾರಣೆ ಮುಂದುವರೆದು ಸೆ.24 ರಂದು ದಿನದಂದು ಮಾನ್ಯ ನ್ಯಾಯಾಧಿಶರು ಬಾಂಡ್ ಮೊತ್ತ ಭರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿರುತ್ತಾರೆ ಹಾಗೂ ಆರಕ್ಷಕರು ಉಪನಿರೀಕ್ಷಕರು ಪೋಲಿಸ್ ಠಾಣೆ ಚಿತ್ತಾಪುರ ರವರಿಗೆ ಪತ್ರ ಬರೆಯಲಾಗಿದ್ದು ಅರ್ಜುನ ಮರೆಪ್ಪಾ ರವರನ್ನು ಬಂಧಿಸಿ ಹಾಜರಪಡಿಸುವಂತೆ ಸೂಚಿಸಲಾಗಿರುತ್ತದೆ.

ಪ್ರಯುಕ್ತ ಪಹಣಿ ಮಾಲಿಕರಾದ ಅರ್ಜುನ ತಂ ಮರೆಪ್ಪಾ ರವರ ಯರಗಲ್ ಗ್ರಾಮದಲ್ಲಿ ವಾಸವಿರದೆ ಇರುವುದರಿಂದ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11.00 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!