ತಾಲೂಕು ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ವತಿಯಿಂದ ಅನ್ನದಾಸೋಹ ಮತ್ತು ಉಚಿತ ಔಷಧಿ ವಿತರಣಾ ಶಿಬಿರಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಚಾಲನೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವದ ಪ್ರಯುಕ್ತ ಚಿತ್ತಾಪುರ ತಾಲೂಕು ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ (ಸಿಟಿಸಿಡಿಎ) ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅನ್ನದಾಸೋಹ ಹಾಗೂ ಉಚಿತ ಔಷಧಿ ವಿತರಣಾ ಶಿಬಿಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಜಾತ್ರಾ ಮಹೋತ್ಸವದ ಅಂಗವಾಗಿ ಇಂತಹ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಅಸೋಸಿಯೇಷನ್ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಸೈಯದ್ ನಿಜಾಮುದ್ದೀನ್ ಚಿಸ್ತಿ ಮಾತನಾಡಿ,ಅನ್ನ ಮತ್ತು ಉಚಿತ ಔಷಧಿ ವಿತರಣೆ ಮಾಡುವ ಈ ಪುಣ್ಯ ಕಾರ್ಯವನ್ನು ಹಾಜರಿದ್ದ ನಾಗರಿಕರು, ಗಣ್ಯರು ಹಾಗೂ ಸ್ಥಳೀಯರು ಶ್ಲಾಘಿಸಿದರು. ಈ ಕಾರ್ಯಕ್ರಮದ ಮೂಲಕ ಸಂಘಟನೆಯು ಸಾಮಾಜಿಕ ಸೇವೆ ಮತ್ತು ಜನಸೇವೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.

ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ರಾಜು ಹುಳಗೋಳ್ ಮೆಡಿಕಲ್, ಶಿವರಾಜ್ ಗುರುಮಿಠಕಲ್, ಶಿವಕುಮಾರ್ ಸುನಾರ್, ವಿಶ್ವರಾಜ್ ಹಣಿಕೇರಾ, ವಿಜಯಕುಮಾರ್ ಅಂಗಡಿ, ಸಂಜು ಹುಡ್ಡೇದಾರ್, ಶ್ರೀಕಾಂತ್, ಗೋಪಾಲ್ ಸಿಂಗ್ ಕುನಾಲ್, ಅಂಬ್ರೀಶ್ ಹುಡ್ಡೇದಾರ್, ಹಣಮಂತ ಕಾಶಿ, ಕೋಟೇಶ್ ರೇಷ್ಮಿ,, ಆನಂದ್ ದೊಡ್ಡಮನಿ, ಭೀಮರಾಯ ವಚ್ಚಾ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!