ದಲಿತ ನಾಯಕ ಮಾನಪ್ಪ ಕಟ್ಟಿಮನಿ ಮೇಲೆ ಹಲ್ಲೆಗೈದ ಆರೋಪಿಯನ್ನು ಬಂಧಿಸುವಂತೆ ಶ್ರೀಕಾಂತ್ ಸುಂಗಲಕರ್ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಸುರಪುರ: ಸಂವಿಧಾನ ಸಮರ್ಪಣಾ ದಿನದಂದು ದಲಿತ ಹಿರಿಯ ನಾಯಕ ಮಾನಪ್ಪ ಕಟ್ಟಿಮನಿ ಅವರ ಮೇಲೆ ನಡೆದ ಹಲ್ಲೆ ನಡೆದಿರುವುದನ್ನು ಖಂಡನಾರ್ಹವಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಬಿಜೆಪಿ ಯುವ ಮುಖಂಡ ಶ್ರೀಕಾಂತ್ ಸುಂಗಲಕರ್ ಒತ್ತಾಯಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ತಾಲೂಕಿನಲ್ಲಿ ಕಾನೂನು ವ್ಯವಸ್ಥೆ ದುರ್ಬಲಗೊಂಡಿದೆ, ಅಧಿಕಾರಿಗಳು ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಕಾನೂನಿನನ್ವಯ ಮಂಜೂರು ಮಾಡಬೇಕು ಎಂಬ ಬೇಡಿಕೆಯಿಂದ ದಲಿತರು ನೂರು ದಿನಗಳ ಹೋರಾಟ ನಡೆಸಿದರು. ಆಗ ಒಂದು ದಿನ ಕೂಡ ತಹಶೀಲ್ದಾರ್ ಅವರು ಭೇಟಿ ನೀಡದೆ, ಈಗ ಅಂಬೇಡ್ಕರ್ ನೆನಪಿಗೆ ಬಂದ್ರ ಈಗ ಯಾಕೆ ಬಂದಿರಾ ಎಂದು ತಹಸಿಲ್ದಾರರನ್ನು ತಡೆದ ದಲಿತ ಮುಖಂಡರ ಮೇಲೆ ಶಾಸಕರ ಬೆಂಬಲಿಗರು ಮಾಡಿದ ವರ್ತನೆ ನಿಜಕ್ಕೂ ಇಲ್ಲಿ ಕಾನೂನು ಇದ್ದಿಯಾ ಇಲ್ಲವೊ ಎಂದು ಸುಂಗಲಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರವಿದ್ದಾಗ ಇದೇ ರೀತಿ ದಲಿತರ ಮೇಲೆ ಹಲ್ಲೆಯಾದ್ರೆ ದಲಿತ ವಿರೋಧಿ ಪಕ್ಷ ಎಂದು ಟೀಕಿಸಿದ್ದವರು, ಇಂದು ಕಾಂಗ್ರೆಸ್ ಶಾಸಕರ ಸಮ್ಮುಖದಲ್ಲೇ ದಲಿತ ನಾಯಕರ ಮೇಲೆ ಹಲ್ಲೆಯಾಗಿದೆ ಇದು ದಲಿತ ವಿರೋಧಿಯಲ್ಲವೇ? ಎಂದು ಸುಂಗಲಕರ್ ಪ್ರಶ್ನಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

