Oplus_0

ಚಿತ್ತಾಪುರದಲ್ಲಿ ಕ್ಯಾಂಡಲ್ ಮಾರ್ಚ್ | ಪಂಚಾಕ್ಷರಿ ಸಾಲಿಮಠ ಅದ್ಭುತ ಮತ್ತು ದಕ್ಷ ಅಧಿಕಾರಿ: ಶಂಕರಗೌಡ ಪಾಟೀಲ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಹಾವೇರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಯುಕ್ತ ಬ್ಯಾಡ್ಮಿಂಟನ್ ಅಸೋಸಿಯೇಷನ್, ಪೊಲೀಸ್ ಇಲಾಖೆ ಹಾಗೂ ನಾಗರಿಕರ ವತಿಯಿಂದ ಪಟ್ಟಣದಲ್ಲಿ ಶನಿವಾರ ರಾತ್ರಿ ಕ್ಯಾಂಡಲ್ ಮಾರ್ಚ್ ಮೆರವಣಿಗೆ ಬಸವೇಶ್ವರ ವೃತ್ತದಿಂದ ಲಾಡ್ಜಿಂಗ್ ಕ್ರಾಸ್ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ಅಮರ ರಹೇ ಅಮರ ರಹೇ ಸಿಪಿಐ ಸಾಲಿಮಠ ಅಮರ ರಹೇ ಎಂದು ನಾಗರಿಕರಿಂದ ಘೋಷಣೆ ಮೊಳಗಿತು.

ಲಾಡ್ಜಿಂಗ್ ಕ್ರಾಸ್ ಹತ್ತಿರ ಜಮಾವಣೆಗೊಂಡ ಪೊಲೀಸ್ ಅಧಿಕಾರಿಗಳು, ಬ್ಯಾಡ್ಮಿಂಟನ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ನಾಗರಿಕರು ಸಾಲಿಮಠ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ಸಾಲಿಮಠ ಒಬ್ಬ ಅದ್ಭುತ, ದಕ್ಷ ಹಾಗೂ ಜನಾನುರಾಗಿ ಪೊಲೀಸ್ ಅಧಿಕಾರಿಯಾಗಿದ್ದರು, ಪೊಲೀಸ್ ಇಲಾಖೆಗೆ ಇಂತಹ ಶಿಸ್ತು ಬದ್ಧತೆಯ ದಕ್ಷ ಅಧಿಕಾರಿಯ ಸೇವೆ ತುಂಬಾ ಅವಶ್ಯಕ ಇತ್ತು, ಆದರೆ ವಿಧಿಯಾಟ, ಅವರ ಸಾವು ಈ ತರಹ ಆಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ, ಸಾಲಿಮಠ ಯಾವತ್ತೂ ನನ್ನ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದರು, ಚಿತ್ತಾಪುರ ಸಿಪಿಐ ಆಗಿ ಉತ್ತಮ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.

ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಈಚೇಗೆ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಭೀಕರ ರಸ್ತೆ ಅಪಘಾತದಲ್ಲಿ ನಿಧನದ ದುರ್ಘಟನೆ ಮಾಸುವ ಮುನ್ನವೇ, ದಕ್ಷ ಮತ್ತು ಜನಸ್ನೇಹಿ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು ತುಂಬಾ ದುಃಖದ ವಿಷಯ. ಚಿತ್ತಾಪುರದಲ್ಲಿ ಸಿಪಿಐ ಆಗಿ ಎರಡ್ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಇವರ ನಿಧನದಿಂದ ಪೊಲೀಸ್ ಇಲಾಖೆಗೆ ತುಂಬಾ ನಷ್ಟ ಉಂಟಾಗಿದೆ ಎಂದು ಭಾವಪೂರ್ಣ ನಮನಗಳು ಸಲ್ಲಿಸಿದರು.

ಅಸೋಸಿಯೇಷನ್ ಕಾರ್ಯದರ್ಶಿ ಬಾಬು ಕಾಶಿ ಮಾತನಾಡಿ, ಬ್ಯಾಡ್ಮಿಂಟನ್ ಅಸೋಸಿಯೇಷನ್ ಜೊತೆ ಸಾಲಿಮಠ ಇರುವ ಸಂಬಂಧ ನೆನೆಸಿ ಭಾವುಕರಾಗಿ ಮಾತನಾಡಿದರು.

ಬಸವರಾಜ ಚಿನ್ನಮಳ್ಳಿ ಮಾತನಾಡಿದರು. ಪಿಎಸ್ಐ ಮಂಜುನಾಥ ರೆಡ್ಡಿ, ಎಎಸ್ಐ ಬಾಬುರಾವ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಾಯಬಣ್ಣ ಕಾಶಿ, ಸಂತೋಷ ಕಲಾಲ್, ಲಖನಸಿಂಗ್ ರಜಪುತ್, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ್, ಜಗದೀಶ್ ಚವ್ಹಾಣ, ವಿಠಲ್ ಕಟ್ಟಿಮನಿ, ನಾಗರಾಜ ರೇಷ್ಮಿ, ನಿಂಗಣ್ಣ ಹೆಗಲೇರಿ, ಸಂಜಯ ಬುಳಕರ್, ಲಕ್ಷ್ಮೀಕಾಂತ ತಾಂಡೂರಕರ್, ಕೋಟೇಶ್ವರ ರೇಷ್ಮಿ, ನಾಗೇಂದ್ರ ಬುರ್ಲಿ, ಆನಂದ ಕಾಶಿ, ಅಹ್ಮದ್ ಸೇಟ್, ಸೂರ್ಯಕಾಂತ ಪೂಜಾರಿ, ಶ್ರೀನಿವಾಸ್ ಪೇಂದು, ಮಲ್ಲಿಕಾರ್ಜುನ ಪೂಜಾರಿ, ರಮೇಶ್ ಬೊಮ್ಮನಳ್ಳಿ, ಕರಣು ಅಲ್ಲೂರ, ತಿಪ್ಪಣ್ಣ ಇವಣಿ, ಅನೀಲ್ ವಡ್ಡಡಗಿ, ಮಲ್ಲಿಕಾರ್ಜುನ ರೆಡ್ಡಿ ಇಜಾರ, ರವಿ ಇವಣಿ, ಬಾಗು ದೊರೆ, ನಾಗಪ್ಪ ಕಲ್ಲಕ್, ಸಾಗರ ಚವ್ಹಾಣ, ಪೇದೆಗಳಾದ ದತ್ತು ಜಾನೆ, ಆಯ್ಯಣ್ಣ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು, ನಾಗರಿಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!