ಚಿತ್ತಾಪುರ ಎಕ್ಸಲೆಂಟ್ ಶಾಲೆಯಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶ್ರೀ ಗುರು ಬಸವ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಎಕ್ಸಲೆಂಟ್ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾ ಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನ ಸಹಯೋಗದೊಂದಿಗೆ ಸಪ್ತಶಕ್ತಿ ಸಂಗಮ ಕಾರ್ಯಕ್ರಮ ನಡೆಯಿತು. ವೇದಿಕೆಯ ಗಣ್ಯರು ಭಾರತ ಮಾತೆ ಮತ್ತು ಸರಸ್ವತಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ದೀಪವನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಮುಖ್ಯ ಅತಿಥಿಗಳಾಗಿ ಸೇಡಂ ಶ್ರೀ ತುಳಜಾ ಭವಾನಿ ಶಿಶುಮಂದಿರ ಪ್ರಧಾನ ಅಧ್ಯಾಪಕಿ ವಿಜಯಲಕ್ಷ್ಮಿ, ನಾಗಜ್ಯೋತಿ ಕೊಡಬಾಗೋನ ಸೇಡಂ, ಸುವರ್ಣ ಪ್ರಭುದೇವ್ ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮಾತೃ ಸಮಿತಿಯ ಸದಸ್ಯರಾದ ವಸಂತಾ, ಪೂಜಾ ಪೋಷಕರಾಗಿ ಶರಣಮ್ಮ, ಸಹ ಶಿಕ್ಷಕಿ ಕುಮಾರಿ ಅಶ್ವಿನಿ ಇವರು ವೇದಿಕೆಯಲ್ಲಿದ್ದರು.
ಕುಟುಂಬ ಪ್ರಬೋಧನ ಅಥವಾ ಪರಿಯಾವರಣದ ಕುರಿತು ಭಾರತೀಯ ದೃಷ್ಟಿ ಈ ವಿಷಯ ಕುರಿತು ನಾಗಜ್ಯೋತಿ ಹಾಗೂ ಭಾರತ ವಿಕಾಸದಲ್ಲಿ ಮಹಿಳೆಯರ ಪಾತ್ರ ಈ ವಿಷಯವನ್ನು ಕುರಿತು ವಿಜಯಲಕ್ಷ್ಮಿ ಪಾಗಾ ಅವರು ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ವೀರ ಸಾಹಸಿ ಮಹಿಳೆಯರ ವೇಷಭೂಷಣವನ್ನು ಧರಿಸಿ ನೃತ್ಯವನ್ನು ನಡೆಸಿಕೊಟ್ಟರು. ನಂತರ ಚಿತ್ತಾಪುರದಲ್ಲಿ ಹೆಸರುವಾಸಿಯಾದಂತ ನಾಗಾವಿ ಮಾಲ್ದಂಡಿ ಜೋಳದ ರೊಟ್ಟಿ ಯಂತ್ರದ ಮೂಲಕ ರೊಟ್ಟಿಯನ್ನು ಮಾಡಿ ಅದರ ಜೊತೆಗೆ ನಾಲ್ಕು ಜನರಿಗೆ ಕೆಲಸ ನೀಡಿ ಸಮಾಜದಲ್ಲಿ ಗುರುತಿಸಿಕೊಂಡ ಮಹಿಳಾ ಸಾಧಕಿಯಾದ ಶರಣಮ್ಮ ಇವರಿಗೆ ಈ ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಚಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಕ್ಷಕಿ ಅಂಬಿಕಾ ಠಾಕೂರ್ ನಿರೂಪಿಸಿದರು, ಶಿಕ್ಷಕಿ ಸುಜಾತಾ ಸ್ವಾಗತಿಸಿದರು, ಶಿಕ್ಷಕಿ ಕುಮಾರಿ ಬಸಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರು, ಮಾತೆಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

