Oplus_0

ಚಿತ್ತಾಪುರದಲ್ಲಿ ನಾಳೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸಾರ್ವಜನಿಕರ ಕುಂದು ಕೊರತೆ ಸಭೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಕ್ಷೇತ್ರದ ಶಾಸಕರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರವರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಯಲ್ಲಿದೆ ಎಂದು ಆಪ್ತ ಸಹಾಯಕ ಮೊಯಿನ್ ಖಾಜಿ ತಿಳಿಸಿದ್ದಾರೆ.

ನಂತರ 12 ಗಂಟೆಗೆ ದಂಡೋತಿ ಗ್ರಾಮದಲ್ಲಿ, ಸ್ವಚ್ಛ ಭಾರತ ಮಿಷಿನ್ (ಗ್ರಾಮೀಣ) ಯೋಜನೆಯಡಿಯಲ್ಲಿ ತಾಲೂಕಿನ ದಂಡೋತಿ ಗ್ರಾಮ ಪಂಚಾಯತಿಯಡಿಯಲ್ಲಿ 10 TDP ಸಾಮರ್ಥ್ಯದ MRF ಘಟಕದ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಮತ್ತು ಚಿತ್ತಾಪುರ ತಾಲೂಕಿನ ತೆಲಂಗಾಣಾ ಗಡಿ ಪುಟಪಾಕ್ ದಿಂದ ಬೋಸ್ಗಾ ರಾ.ಹೆ 126, ಕಿ.ಮೀ.64.32 ರಿಂದ 75.00 ಮತ್ತು 88.00 ರಿಂದ 95.50 (ಮರಗೋಳ ಕ್ರಾಸ್ ದಿಂದ ತೆಂಗಳಿ ಕ್ರಾಸ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮ ನಡೆಯಲ್ಲಿದೆ ಎಂದು ಸಚಿವರ ಆಪ್ತ ಸಹಾಯಕ ಮೋಯಿನ್ ಖಾಜಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!