ಜೆಡಿಎಸ್ ಹಿರಿಯ ಮುಖಂಡ ಶಾಮರಾವ್ ಸುರನ್ ನಿಧನ, ಮುಖಂಡರ ಸಂತಾಪ 

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಹಿರಿಯ ಮುಖಂಡರಾದ ಶಾಮರಾವ್ ಸುರನ್ ಅವರು ಗುರುವಾರ ನಿಧನರಾಗಿದ್ದಾರೆ.

ಅವರ ನಿಧನಕ್ಕೆ ಕಲಬುರಗಿ ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಸೇರಿದಂತೆ ಬಸವರಾಜ್ ತಡಕಲ್, ಬಸವರಾಜ್, ಬೀರಬಿಟ್ಟೆ, ಮಲ್ಲಿಕಾರ್ಜುನ ಸಂಗಣಿ, ಮಹಾಂತಪ್ಪ ಮದರಿ, ಚಂದು ಮೋರೆ, ದೇವೇಗೌಡ ತೆಲ್ಲೂರ, ಜಾಫರ್ ಹುಸೇನ್, ರಿಝವಾನ್ ಅಹಮದ್, ಮಹಿಮುದ್ ಖುರೇಶಿ, ಸಾಬೀರ್ ಗಣಿ, ಪ್ರವೀಣ್ ಜಾಧವ ಸೇರಿದಂತೆ ತಾಲೂಕ ಅಧ್ಯಕ್ಷರು ಕಾರ್ಯಕರ್ತರು ಶಾಮರಾವ್ ಸುರನ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!