ದಂಡೋತಿ ಗ್ರಾಮದಲ್ಲಿ ಅರಾಫತ್ ಶೇಖ್ ನೇತೃತ್ವದಲ್ಲಿ ಇಫ್ತಾರ್ ಕೂಟ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಪವಿತ್ರ ರಂಜಾನ್ ಮಾಸದ ಪ್ರಯುಕ್ತ ವಕ್ಫ್ ಬೋರ್ಡ್ ಜಿಲ್ಲಾ ಉಪಾಧ್ಯಕ್ಷ ಅರಾಫತ್ ಶೇಖ್ ನೇತೃತ್ವದಲ್ಲಿ ಮಂಗಳವಾರ ಸಂಜೆ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.
ಇಫ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಪಾಲ್ಗೊಂಡು ಕೋಮು ಸೌಹಾರ್ದತೆ, ಸಹೋದರತ್ವ ಭಾವನೆಯನ್ನು ಸಾರಿದರು. ರಂಜಾನ್ ಪ್ರಯುಕ್ತ ರೋಜಾನಿರತ ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬಂದು, ಅರಾಫತ್ ಶೇಖ್ ಅವರು ಏರ್ಪಡಿಸಿದ್ದ ಪ್ರೀತಿಯ ಇಫ್ತಾರ್ ಕೂಟದಲ್ಲಿ ಖರ್ಜೂರ, ಸೇಬು, ಬಾಳೆಹಣ್ಣು, ಕಲ್ಲಂಗಡಿ, ಖರ್ಬೂಜ್, ಬಜಿ, ಪೈನಾಪಲ್, ಆರೇಂಜ್, ಅಂಗುರು ಸೇರಿದಂತೆ ಇತರೇ ಹಣ್ಣುಗಳು ಸವಿದು ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ್ ತಿಮ್ಮನಾಯಕ, ಅಜೀಜ್ ಸೇಟ್, ರಶೀದ್ ಪಠಾಣ್, ದಾವುದ್ ಪಟೇಲ್, ಸೀರಾಜ್ ದರ್ಗಾ, ಮುನಿಯಪ್ಪ ಕೊಳ್ಳಿ, ಸಂತೋಷ ನಾಟೀಕಾರ, ಸಾಬಣ್ಣ ಭರಾಟೆ, ಮಹೇಶ್ ಮುಕೆ, ಶಂಕರ ಕೊಳ್ಳಿ, ಸಿದ್ದು ಯರಗಲ್, ವೆಂಕಟೇಶ್ ನೌಲಬೋ, ನಾಗಣ್ಣ ವಾರದ್, ಅಜಿಮೋದ್ದಿನ್ ಯಾದಗಿರಿ, ಇಸ್ತಾಕ್ ಯಾದಗಿರಿ, ಮೈನೋದ್ದಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

