ಮಕ್ಕಳ ಡೊಳ್ಳು ಕುಣಿತ ಆಕರ್ಷಕ
ಹಣ್ಣಿಕೇರಾ ಗ್ರಾಮದಲ್ಲಿ ನಾಳೆ ಅಂಬಾರಿಯಲ್ಲಿ ಶ್ರೀ ಗ್ರಾಮ ದೇವತೆಯ ಉತ್ಸವ ಮೂರ್ತಿ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಹಣ್ಣಿಕೇರಾ ಗ್ರಾಮದಲ್ಲಿ ಐದನೇ ವರ್ಷದ ನವರಾತ್ರಿ ಉತ್ಸವದ ನಿಮಿತ್ತ ಗ್ರಾಮ ದೇವತೆಗೆ 9 ದಿನಗಳ ಕಾಲ ಬೆಳಗ್ಗೆ ಮತ್ತು ಸಾಯಂಕಾಲ ವಿಶೇಷ ಪೂಜೆ ಮತ್ತು ಭಜನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಅ.12 ರಂದು ವಿಜಯದಶಮಿ ದಿನದಂದು ಅಂಬಾರಿಯಲ್ಲಿ ಶ್ರೀ ಗ್ರಾಮ ದೇವತೆಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ ಎಂದು ಗ್ರಾಮದ ಮುಖಂಡ ಶಿವರಾಜ್ ಬಳಿಗಾರ್ ತಿಳಿಸಿದ್ದಾರೆ.
ಕಲೆಯನ್ನು ಉಳಿಸುವ ಸಲುವಾಗಿ ಗ್ರಾಮದಲ್ಲಿ 5 ನೇ ವರ್ಷದ ಅಂಬಾರಿಯ ಉತ್ಸವವನ್ನು ಮಕ್ಕಳಿಗೆ ಡೊಳ್ಳು ಬಡಿಯುವುದನ್ನು ನೃತ್ಯ ಮಾಡುವುದನ್ನು ಡೊಳ್ಳಿನ ಪದಗಳನ್ನು ಕಲಿಸುವುದರ ಮೂಲಕ ಸಂಸ್ಕೃತಿಕ ಕಲೆಯನ್ನು ಮಕ್ಕಳಲ್ಲಿ ಮೂಡಿಸಲಾಯಿತು.
ಮುಖಂಡರಾದ ಗ್ರಾಮದ ಹಿರಿಯರಾದ ದೇವೇಂದ್ರಗೌಡ ಮಾಲಿ ಪಾಟೀಲ, ಶರಣಪ್ಪ ಸಾಹು, ಭೀಮರಾಯ ಯಂಕಣ್ಣ ಕೋಟಿಗೇರಿ, ಮಲ್ಲಿಕಾರ್ಜುನ ಡಬ್ಬಿಗೇರ್, ಯುವ ಮುಖಂಡರಾದ ಜಗದೀಶ ಪಾಟೀಲ, ಹನುಮಂತ ರಾಂಪುರ್, ಮೋನಪ್ಪ ಡಬ್ಬಿಗೇರೆ, ಮಲ್ಲಪ್ಪ ಕೊಲ್ಲೂರ್, ಬಸವರಾಜ್ ಹೂಗಾರ್, ಕೋರಿಸಿದ್ದ ಗಂಜಿ ಸೇರಿದಂತೆ ಊರಿನ ಇಲ್ಲ ಭಕ್ತಾದಿಗಳು ಸಾರ್ವಜನಿಕರು ಭಾಗವಹಿಸಿದ್ದರು.