Oplus_0

ಚಿತ್ತಾಪುರದಲ್ಲಿ ಹಟಗಾರ ಸಮಾಜದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಣೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಚೌಡಮ್ಮ ದೇವಸ್ಥಾನದಲ್ಲಿ ಹಟಗಾರ ಸಮಾಜದ ವತಿಯಿಂದ 11ನೇ ಶತಮಾನದ ಆದ್ಯ ವಚನಕಾರ, ಶಿವಶರಣ ದೇವರ ದಾಸಿಮಯ್ಯನವರ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಭಕ್ತಿ-ಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಹಟಗಾರ ಸಮಾಜದ ಅಧ್ಯಕ್ಷ ಬಸವರಾಜ ರಾಜೋಳ್ಳಿ ಅವರು ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ವಚನ ಸಾಹಿತ್ಯಕ್ಕೆ ಭದ್ರ ಅಡಿಪಾಯ ಹಾಕಿದ ದಾಸಿಮಯ್ಯನವರ ‘ರಾಮನಾಥ ‘ ಅಂಕಿತನಾಮದ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ನೇಯ್ಗೆ ಕಾಯಕದ ಮೂಲಕವೇ ಕೈಲಾಸ ಕಂಡ ದಾಸಿಮಯ್ಯನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಟಗಾರ ಸಮಾಜದ ಮುಖಂಡರಾದ ರಾಚಣ್ಣ ವೈಕುಂಠ, ವಾಸುದೇವ ಗಂಜಿ, ಬಸವರಾಜ ಖ್ಯಾಲಾ, ರಾಚಣ್ಣ ಕಾಳಗಿ, ರಾಜಶೇಖರ ಬಳ್ಳಾ, ಚೆನ್ನಪ್ಪ ಜಾಡರ, ಅಯ್ಯಣ್ಣ ಅಲ್ಲಮ, ಶಿವಕುಮಾರ ಶೀಲವಂತ, ರಾಜು ಮದಗುಂಟಿ ಸೇರಿದಂತೆ ಸಮಾಜದ ಹಿರಿಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತಿಯನ್ನು ಯಶಸ್ವಿಗೊಳಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!