Oplus_0

ಮಳಖೇಡ ಹಜರತ್ ಸೈಯದಶಾಹ ಖಲಿಫತ್-ಉರ್-ರಹಮಾನ ಖಾದ್ರಿ ದರ್ಗಾಶರೀಫ್ 141 ನೇ ವಾರ್ಷಿಕ ಉರುಸ್ ಶರೀಫ್ ಮಾ. 26 ರಿಂದ ಪ್ರಾರಂಭ 

ನಾಗಾವಿ ಎಕ್ಸಪ್ರೆಸ್

ಮಳಖೇಡ: ಗ್ರಾಮದ ಖುತುಬ್-ಎ-ದಬ್ಬನ್ ಹಜರತ್ ಸೈಯದಶಾಹ ಖಲಿಫತ್-ಉರ್-ರಹಮಾನ ಖಾದ್ರಿ ದರ್ಗಾಶರೀಫ್ 141 ನೇ ವಾರ್ಷಿಕ ಉರುಸ್ ಶರೀಫ್ (ಜಾತ್ರೆ) ಹಾಗೂ ಖುತುಬುಲ್‌ ವಖ್ತ ಮೀರಾ ಹಜರತ್ ಅಲಹಜ್ ಸೈಯದ ಶಾಹ ನೇಮತುಲ್ಲಾ ಖಾದ್ರಿ ಅಲ್‌ಜಿಲಿ ರವರ 21ನೇ ಉರುಸ್ ಶರೀಫ್ (ಜಾತ್ರೆ) ಮಾರ್ಚ್ 26 ಪ್ರಾರಂಭಗೊಂಡು 29 ರವರೆಗೆ ನಡೆಯಲಿದೆ ಎಂದು ದರ್ಗಾ ಕಮಿಟಿಯವರು ತಿಳಿಸಿದ್ದಾರೆ.

ಪೂಜ್ಯ ಶ್ರೀ ಹಜರತ್ ಅಲ್‌ಹಜ್ ಸೈಯದಶಾಹ ಮುಸ್ತಫಾ ಖಾದ್ರಿ ಸಜ್ಜಾದ ನಶೀನ ವ ಮುತುವಲ್ಲಿ ಮಳಖೇಡ ಇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರಗುವವು.

26 ರಂದು ಹಲಖಾ (ಪ್ರಾರ್ಥನೆ) ಮತ್ತು ಗುಸಲ್ ಶರೀಫ್ (ಗದ್ದುಗೆಗೆ ಅಭಿಷೇಕ) 27 ರಂದು ಮಳಖೇಡ, ಹೂಡಾ (ಬಿ), ಸಂಗಾವಿ, ಮಳಖೇಡ ರೇಲ್ವೆ ಸ್ಟೇಷನ್ (ರಾಜಶ್ರೀ ಸಿಮೆಂಟ್ ಫ್ಯಾಕ್ಟರಿ) ಕುನ್ನೂರ ಹಾಗೂ ದಿಗ್ಗಾಂವ ಗ್ರಾಮಗಳಿಂದ ಭವ್ಯ ಸಂದಲ ಮೆರವಣಿಗೆ. ನಂತರ ಹಜರತ್ ಸಜ್ಜಾದಾ ನಶೀನರವರ ಅಮೃತ ಹಸ್ತದಿಂದ ಗಂಧ ಲೇಪನ ಜರುಗುವದು.

28 ರಂದು ಸಂಜೆ ಮಳಖೇಡದಿಂದ ಜುಲುಸ್-ಎ-ಪಂಖಾ, ರಾತ್ರಿ 8 ಗಂಟೆಗೆ ಅಖಿಲ ಭಾರತ ಮಾನವ ಧರ್ಮ ಸೇವಾ ಟ್ರಸ್ಟ್ (ರಿ.) ನ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಮಾನವ ಧರ್ಮ ಚಿಂತನ ಸಭೆ ಇದರಲ್ಲಿ ಮಠಾಧೀಶರು, ಸಜ್ಜಾದಾನಶೀನರು, ಮೌಲ್ವಿಗಳು, ಪಂಡಿತರು ಹಾಗೂ ಉನ್ನತ ಅಧಿಕಾರಿಗಳು ಪಾಲ್ಗೊಳ್ಳುವರು. ನಂತರ ಖವ್ವಾಲಿ ಹಾಗೂ ಗೀಗೀ ಪದಗಳ ಕಾರ್ಯಕ್ರಮ ಜರುಗುವವು. 29 ರಂದು ಮುಂಜಾನೆ 7 ಗಂಟೆಗೆ ಜಿಯಾರತ್ (ಫಾತೆಹಾಖಾನಿ) ಪೂಜ್ಯ ಹಜರತ್ ಸಜ್ಜಾದಾನಶೀನರವರ ಅಮೃತ ಹಸ್ತದಿಂದ ಪ್ರಸಾದ ವಿತರಣೆ. ನಂತರ ಮಳಖೇಡ ಹಾಗೂ ಹೂಡಾ (ಬಿ) ಭಕ್ತರ ವತಿಯಿಂದ ಬೆಳ್ಳಿಯ ಖಡೆಗಳ ಹಾಗೂ ಬೆಳ್ಳಿಯ ಗದೆಯ ಕುಸ್ತಿಗಳು ಜರುಗುವವು ಎಂದು ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!