ಏಪ್ರಿಲ್ 1 ರಂದು ಹಿರೇಸಾವಳಗಿ ಶ್ರೀ ಜಗದ್ಗುರು ಶಿವಲಿಂಗೇಶ್ವರ ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ತಾಲೂಕಿನ ಹಿರೇಸಾವಳಗಿ ಮೂಲ ಕರ್ತೃ ಮಹಾ ಮಹಿಮಾಶಾಲಿಗಳಾದ ಶ್ರೀ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಶ್ರೀ ಮ.ನಿ.ಪ್ರ.ಸ್ವಗುರುನಾಥ ಮಹಾಸ್ವಾಮಿಗಳವರ ಘನ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗುವವು. ಏಪ್ರಿಲ್ 1 ರಂದು ಸಾಯಂಕಾಲ 6 ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವವು ದಮಾ.27 ದಿಂದ ಏಪ್ರಿಲ್ 3 ರವರೆಗೆ ಕಾರ್ಯಕ್ರಮಗಳು ಬಹು ವಿಜೃಂಭಣೆಯಿಂದ ಜರುಗುವವು, ಕಾರಣ ಸಕಲ ಸದ್ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಗುರುದರ್ಶನಾಶೀರ್ವಾದ ಪಡೆದು, ದಾಸೋಹ ಪ್ರಸಾದವನ್ನು ಸ್ವೀಕರಿಸಿ ಪುನಿತರಾಗಬೇಕು ಎಂದು ಕೋರಿದ್ದಾರೆ.
ಕಾರ್ಯಕ್ರಮಗಳ ವಿವರ:
ಮಾ.27 ರಿಂದ 5 ದಿನಗಳವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಹಾಗೂ ಶ್ರೀಮಠದ ಪೂಜ್ಯರ ಮೆರವಣಿಗೆಯೊಂದಿಗೆ ಶ್ರೀ ಕಲ್ಯಾಣ ಕಟ್ಟೆಯ ದರ್ಶನ, ದಿ.30 ರಂದು ಬೆಳಗ್ಗೆ 10 ಗಂಟೆಗೆ ಶಿವಗಣಾರಾಧನೆ ಸಾಯಂಕಾಲ 5 ಗಂಟೆಗೆ ವಸ್ತ್ರದಾನ, ದಿ. 31 ರಂದು ಸಾಯಂಕಾಲ 4 ಗಂಟೆಗೆ ಉಚ್ಚಾಯಿ ಉತ್ಸವ ಏಪ್ರಿಲ್ 1 ರಂದು ದವನದ ಹುಣ್ಣಿಮೆ ಸಾಯಂಕಾಲ 6 ಗಂಟೆಗೆ ಮಠದ ಪೀಠಾಧಿಪತಿಗಳು ಪಲ್ಲಕ್ಕಿಯಲ್ಲಿ ಆರೂಢರಾಗಿ ರಥದ ಸ್ಥಳಕ್ಕೆ ತಲುಪಿದ ಕೂಡಲೆ ರಥಸಾಗುವುದು. ಏಪ್ರಿಲ್ 2 ರಂದು ರಾತ್ರಿ 4 ಗಂಟೆಗೆ ಶ್ರೀಗಳವರ ಆಗಮನದೊಂದಿಗೆ ಮದ್ದು ಸುಡುವುದು. ದಿ. ಏಪ್ರಿಲ್ 3 ರಂದು ಮಧ್ಯಾಹ್ನ 11 ಗಂಟೆಗೆ ಶ್ರೀಗಳ ಹಸ್ತದಿಂದ ಬಿದಾಯಿ ಹಾಗೂ ಸುಪ್ರಸಿದ್ದ ಕಲಾವಿದರಿಂದ ಭಜನೆ, ಗಾಯನ, ವಾದನ, ಗೀಗೀ ಪದಗಳು ಮೊದಲಾದ ಮನೊರಂಜನೆಯ ಕಾರ್ಯಕ್ರಮಗಳು ಜರಗುವವು ಎಂದು ಮಾಹಿತಿ ನೀಡಿದ್ದಾರೆ.
ಭಕ್ತಾದಿಗಳ ಅನುಕೂಲವಾಗುವಂತೆ ಕಲಬುರಗಿ ಸೂಪರ್ ಮಾರ್ಕೆಟ್‌ದಿಂದ ವಿಶೇಷ ಬಸ್ಸಿನ ಸೌಕರ್ಯ ಒದಗಿಸಲಾಗಿದೆ ಎಂದು ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ.

