ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ | ವಿದ್ಯಾನಿಕೇತನ ಪ್ರೌಢ ಶಾಲೆಗೆ ಸತತವಾಗಿ 8 ನೇ ಬಾರಿ ಶೇ.100 ಫಲಿತಾಂಶ ಶ್ಲಾಘನೀಯ: ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ವಿದ್ಯಾನಿಕೇತನ (ಆಂಗ್ಲ ಮಾಧ್ಯಮ) ಪ್ರೌಢ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ 8 ನೇ ಬಾರಿ ಶೇ.100 ಫಲಿತಾಂಶ ಪಡೆಯುವ ಮೂಲಕ ಈ ಭಾಗದಲ್ಲಿ ದಾಖಲೆ ಮಾಡಿರುವುದು ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಚಾಲಿತ ವಿದ್ಯಾನಿಕೇತನ ಪ್ರೌಢ ಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತಾಲೂಕಿನ ಟಾಪ್ 10 ವಿದ್ಯಾರ್ಥಿಗಳಲ್ಲಿ ವಿದ್ಯಾನಿಕೇತನ ಪ್ರೌಢ ಶಾಲೆಯ 5 ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಸ್ಥಾನ ಗಿಟ್ಟಿಸಿಕೊಂಡಿರುವುದು ಹೆಮ್ಮೆಯ ವಿಷಯ ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ವಿದ್ಯಾನಿಕೇತನ ಶಾಲೆ ಹೆಸರುವಾಸಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಫಲಿತಾಂಶದಲ್ಲಿ ಕಲಬುರಗಿ ಕೊನೆ ಸ್ಥಾನದಲ್ಲಿದ್ದರೂ ಈ ಬಾರಿ ಚೇತರಿಸಿಕೊಂಡಿದೆ. ಶೈಕ್ಷಣಿಕವಾಗಿ ಚಿತ್ತಾಪುರ ತಾಲೂಕು ಕಳೆದ ವರ್ಷಕ್ಕಿಂತ ಈ ಬಾರಿ ಚೇತರಿಸಿಕೊಂಡು ಸುಧಾರಣೆಗೊಂಡಿದೆ ಫಲಿತಾಂಶ ದ್ವಿಗುಣವಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು ಆದರೆ ಈ ಬಾರಿ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿ ಶೇ.40.88 ಫಲಿತಾಂಶ ಬಂದಿತ್ತು, ಈ ಬಾರಿ ಶೇ.87.89 ಫಲಿತಾಂಶ ಬಂದಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಪ್ರಮುಖ ಪಾತ್ರ ವಹಿಸಿದೆ, ಅದರಲ್ಲೂ ಮುಖ್ಯಗುರು ರಮೇಶ್ ಯಾದವಾಡ ಅವರ ಇಚ್ಛಾಶಕ್ತಿ, ಅಪಾರ ಕಾಳಜಿ ಹಾಗೂ ಕಠಿಣ ಪರಿಶ್ರಮದಿಂದ ಈ ಬಾರಿಯೂ ಶೇ.100 ಫಲಿತಾಂಶ ಬರಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೂ, ಶಾಲೆಯ ಎಲ್ಲಾ ಶಿಕ್ಷಕರಿಗೂ ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಪೇಂದು ಅಧ್ಯಕ್ಷತೆ ವಹಿಸಿದ್ದರು, ಆಡಳಿತ ಮಂಡಳಿಯ ಸದಸ್ಯರಾದ ರಾಜಶೇಖರ್ ಬುಳ್ಳಾ, ಶಂಭುಲಿಂಗಪ್ಪ ಶಿಲ್ಪಿ, ಸುರೇಶ್ ವಿಶ್ವಕರ್ಮ, ಶಿವುಕುಮಾರ ಶೀಲವಂತ, ರಮೇಶ್ ಭಕ್ತಿ, ಪ್ರಲ್ಹಾದ ವಿಶ್ವಕರ್ಮ, ಶ್ರೀನಿವಾಸ ರೆಡ್ಡಿ ಪಾಲಪ್, ಪ್ರೌಢ ಶಾಲೆ ಮುಖ್ಯಗುರು ರಮೇಶ್ ಯಾದವಾಡ, ಶ್ರೀದೇವಿ ಸಿಂಪಿ, ಗೌರಿ ಅಳ್ಳೋಳ್ಳಿ, ಚಂದ್ರಕಲಾ, ದೇವಿ, ಮಹೇಶ್, ರೂಪಾಲಿ, ದೇವಿಕಾ, ಪ್ರಾಥಮಿಕ ಶಾಲಾ ಶಿಕ್ಷಕರಾದ ಸುಶೀಲಾ, ರೇಣುಕಾ, ಫರಹತಾ ಸಿದ್ದಿಕಿ, ಅನ್ನಪೂರ್ಣ, ದಿವ್ಯ, ಜಗದೇವಿ, ಅಪೂರ್ವ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಾದ ಸಂತೋಷ, ಪ್ರಜ್ಞಾ ಕುಲಕರ್ಣಿ, ಕಲ್ಪನಾ ಸಜ್ಜನ್, ನಿಕೀತಾ, ನಾಗರತ್ನ ಇದ್ದರು.
ಅನುಶ್ರೀ ಮತ್ತು ಮಹೇಕ್ ಅವರು ನಿರೂಪಿಸಿದರು, ತೇಜಸ್ವಿನಿ ಸ್ವಾಗತಿಸಿದರು, ಅರ್ಶಿಯಾ ವಂದಿಸಿದರು.

